ADVERTISEMENT

ಕೋಲ್ಕತ್ತ ಮೇಯರ್ ರಾಜೀನಾಮೆ

ಪಿಟಿಐ
Published 22 ನವೆಂಬರ್ 2018, 20:00 IST
Last Updated 22 ನವೆಂಬರ್ 2018, 20:00 IST
ಸೋವನ್‌ ಚಟರ್ಜಿ
ಸೋವನ್‌ ಚಟರ್ಜಿ   

ಕೋಲ್ಕತ್ತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚನೆಯಂತೆ ಕೋಲ್ಕತ್ತ ಮೇಯರ್‌ ಸ್ಥಾನಕ್ಕೆ ಟಿಎಂಸಿ ಹಿರಿಯ ನಾಯಕ ಸೋವನ್‌ ಚಟರ್ಜಿ ಗುರುವಾರ ರಾಜೀನಾಮೆ ನೀಡಿದ್ದಾರೆ.

ಮಮತಾ ನಿಷ್ಠ, ನಗರಾಭಿವೃದ್ಧಿ ಮತ್ತು ಮುನ್ಸಿಪಲ್‌ ವ್ಯವಹಾರ ಸಚಿವ ಫಿರ್ಹಾದ್‌ ಹಕೀಮ್‌ ಅವರನ್ನು ನೂತನ ಮೇಯರ್ ಆಗಿ ನೇಮಕ ಮಾಡಲಾಗಿದೆ.

ಪಾಲಿಕೆ ಸದಸ್ಯರಲ್ಲದವರನ್ನು ಕೂಡ ಮೇಯರ್‌ ಸ್ಥಾನಕ್ಕೆ ನೇಮಕ ಮಾಡಲು ಅವಕಾಶ ಕಲ್ಪಿಸುವ ಕೋಲ್ಕತ್ತ ಮಹಾನಗರ ಪಾಲಿಕೆ (2ನೇ ತಿದ್ದುಪಡಿ) ಮಸೂದೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಗುರುವಾರ ಮಧ್ಯಾಹ್ನ ಅನುಮೋದನೆ ನೀಡಿದ ಬೆನ್ನಲ್ಲೇ ಹಕೀಮ್‌ ಅವರನ್ನು ನೇಮಿಸಲಾಗಿದೆ. ಸ್ವತಃ ಹಕೀಮ್‌ ಅವರೇ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದು ವಿಶೇಷ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.