ADVERTISEMENT

ಕೋಟಾ | ವಿದ್ಯಾರ್ಥಿಗಳಿಗಾಗಿ ತೆರೆದ ಸಹಾಯವಾಣಿಗೆ ಎರಡೇ ತಿಂಗಳಲ್ಲಿ 373 ದೂರು

ಪಿಟಿಐ
Published 11 ಡಿಸೆಂಬರ್ 2023, 3:11 IST
Last Updated 11 ಡಿಸೆಂಬರ್ 2023, 3:11 IST
ಸಹಾಯವಾಣಿಗೆ ಕರೆ– ಸಾಂಕೇತಿಕ ಚಿತ್ರ
ಸಹಾಯವಾಣಿಗೆ ಕರೆ– ಸಾಂಕೇತಿಕ ಚಿತ್ರ   

ಕೋಟಾ: ರಾಜಸ್ಥಾನದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಕೋಟಾದಲ್ಲಿ ವಿದ್ಯಾರ್ಥಿಗಳಿಗೆಂದೇ ತೆರೆದ ಸಹಾಯವಾಣಿಗೆ ಎರಡೇ ತಿಂಗಳಲ್ಲಿ 373 ದೂರುಗಳು ದಾಖಲಾಗಿವೆ. ಅದರಲ್ಲಿ ಖಿನ್ನತೆಯಿಂದ ಬಳಲುತ್ತಿರುವವರಿಗೆ ವೃತ್ತಿಪರ ಸಮಾಲೋಚನೆ ಮತ್ತು ವೈದ್ಯಕೀಯ ನೆರವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಸೆಪ್ಟೆಂಬರ್‌ನಿಂದ ಈವರೆಗೆ ಕೋಟಾ ಆಡಳಿತ ಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದೆ. 

ನಿಯಮಿತವಾಗಿ ನಡೆಸುತ್ತಿದ್ದ ಪರೀಕ್ಷೆಗಳನ್ನು, ಒತ್ತಡರಹಿತ ವಾತಾವರಣ ನಿರ್ಮಿಸುವುದಕ್ಕಾಗಿ ರದ್ದುಗೊಳಿಸಲಾಗಿದೆ, ಅಲ್ಲದೆ ಪ್ರೇರಣಾದಾಯಕ ಮಾತುಗಳಿಂದ ಮಕ್ಕಳನ್ನು ಸಕಾರಾತ್ಮಕ ಯೋಚನೆಯೆಡೆಗೆ ಕರೆದೊಯ್ಯುವ ಕೆಲಸವೂ ನಡೆಯುತ್ತಿದೆ ಎಂದು ಆಡಳಿತ ಮಂಡಳಿ ಹೇಳಿದೆ.

ADVERTISEMENT

ಒಟ್ಟು 373 ಪ್ರಕರಣಗಳಲ್ಲಿ  35 ಪ್ರಕರಣಗಳು ಒತ್ತಡ ಮತ್ತು ಖಿನ್ನತೆಗೆ ಸಂಬಂಧಿಸಿದ್ದಿದೆ. ಉಳಿದಂತೆ ಆಹಾರದ ಸಮಸ್ಯೆ, ಶುಲ್ಕ ಮರುಪಾವತಿ, ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳು ಮತ್ತು ಅನಪೇಕ್ಷಿತ ಕರೆಗಳಿಗೆ ಸಂಬಂಧಿಸಿದ್ದು ಎಂದು ವೃತ್ತಿಪರ ಸಲಹೆಗಾರರು ತಿಳಿಸಿದ್ದಾರೆ.

ತರಬೇತಿ ಕೇಂದ್ರದಲ್ಲಿ ಈ ವರ್ಷ 26 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.