ADVERTISEMENT

ಬಂಕರ್‌, ಮ್ಯೂಸಿಯಂ ಅನಾವರಣ

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉದ್ಘಾಟನೆ: ಕಳೆದ ವರ್ಷ ಶೋಧನೆ

ಪಿಟಿಐ
Published 18 ಆಗಸ್ಟ್ 2019, 19:32 IST
Last Updated 18 ಆಗಸ್ಟ್ 2019, 19:32 IST
ಬಂಕರ್ ಮ್ಯೂಸಿಯಂನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಸವಿತಾ ಕೋವಿಂದ್‌, ಸ್ವಾತಿ ಕೋವಿಂದ್‌, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ರಾಜ್ಯಪಾಲ ವಿದ್ಯಾಸಾಗರ ರಾವ್‌  –ಪಿಟಿಐ ಚಿತ್ರ
ಬಂಕರ್ ಮ್ಯೂಸಿಯಂನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಸವಿತಾ ಕೋವಿಂದ್‌, ಸ್ವಾತಿ ಕೋವಿಂದ್‌, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ರಾಜ್ಯಪಾಲ ವಿದ್ಯಾಸಾಗರ ರಾವ್‌  –ಪಿಟಿಐ ಚಿತ್ರ   

ಮುಂಬೈ: ರಾಜಭವನ ಆವರಣದಲ್ಲಿ ಬ್ರಿಟಿಷರ ಕಾಲದ ನೆಲದಡಿಯ ಬಂಕರ್‌ ಅನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾನುವಾರ ಉದ್ಘಾಟಿಸಿದರು. ಕಳೆದ ವರ್ಷ ಈ ಬಂಕರನ್ನು ಪತ್ತೆ ಹಚ್ಚಲಾಗಿತ್ತು.

ಸುಮಾರು 15,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಇದನ್ನು 19 ಶತಮಾನದ ಆರಂಭದಲ್ಲಿ ನಿರ್ಮಿಸಲಾಗಿತ್ತು. ಇದನ್ನು ನವೀಕರಿಸಿ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ. ಈ ವರ್ಷದ ಅಂತ್ಯಕ್ಕೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.

2 ಫಿರಂಗಿಗಳು, 13 ಕೊಠಡಿಗಳು, 20 ಅಡಿ ಎತ್ತರದ ಪ್ರವೇಶದ್ವಾರವನ್ನು ಒಳಗೊಂಡಿದೆ. ಮಾದರಿ ಒಳಚರಂಡಿ ವ್ಯವಸ್ಥೆ, ಮದ್ದು– ಗುಂಡುಗಳ ಕೊಠಡಿಗಳು ಗಮನ ಸೆಳೆಯುವ ಅಂಶಗಳಾಗಿವೆ ಎಂದು ರಾಜಭವನ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.