ADVERTISEMENT

ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ: ಕೆ.ಪಿ. ಶರ್ಮ ಒಲಿ

ಪಿಟಿಐ
Published 13 ಜುಲೈ 2020, 20:42 IST
Last Updated 13 ಜುಲೈ 2020, 20:42 IST
ನಿಜವಾದ ಪ್ರಧಾನಿ ಕೆ.ಪಿ. ಶರ್ಮ ಒಲಿ
ನಿಜವಾದ ಪ್ರಧಾನಿ ಕೆ.ಪಿ. ಶರ್ಮ ಒಲಿ    

ಕಠ್ಮಂಡು:ನಿಜವಾದ ಅಯೋಧ್ಯೆ ಭಾರತದಲ್ಲಿ ಅಲ್ಲ, ನೇಪಾಳದಲ್ಲಿದೆ ಮತ್ತು ರಾಮನು ನೇಪಾಳ ದಕ್ಷಿಣ ಭಾಗದ ಥೋರಿಯಲ್ಲಿ ಜನಿಸಿದ್ದನು ಎಂದು ಪ್ರಧಾನಿ ಕೆ.ಪಿ. ಶರ್ಮ ಒಲಿ ಹೇಳಿದ್ದಾರೆ.

ಈ ಹೇಳಿಕೆಯನ್ನು ನವದೆಹಲಿಯಲ್ಲಿ ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಬಿಜಯ್‌ ಸೋನ್ಕರ್‌ ಶಾಸ್ತ್ರಿ, ಎಡಪಕ್ಷಗಳು ಭಾರತದಲ್ಲಿ ಕೂಡ ಜನರ ನಂಬಿಕೆಯೊಂದಿಗೆ ಚೆಲ್ಲಾಟವಾಡಿವೆ. ಭಾರತದಲ್ಲಿ ಆಗಿರುವಂತೆ ನೇಪಾಳದಲ್ಲಿ ಕೂಡ ಕಮ್ಯುನಿಸ್ಟ್‌ ಪಕ್ಷದವರು ಜನರಿಂದ ತಿರಸ್ಕಾರಕ್ಕೆ ಒಳಗಾಗಲಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT