ADVERTISEMENT

ಮುಂಬೈನಲ್ಲಿ ದಹಿ ಹಂಡಿ ಉತ್ಸವ ವೇಳೆ ಬಿದ್ದು 24 ಮಂದಿಗೆ ಗಾಯ

ಪಿಟಿಐ
Published 19 ಆಗಸ್ಟ್ 2022, 14:19 IST
Last Updated 19 ಆಗಸ್ಟ್ 2022, 14:19 IST
ಮುಂಬೈನಲ್ಲಿ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಡೆದ ದಹಿ ಹಂಡಿ ಉತ್ಸವ –ಎಎಫ್‌ಪಿ ಚಿತ್ರ
ಮುಂಬೈನಲ್ಲಿ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಡೆದ ದಹಿ ಹಂಡಿ ಉತ್ಸವ –ಎಎಫ್‌ಪಿ ಚಿತ್ರ   

ಮುಂಬೈ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶುಕ್ರವಾರ ನಡೆದ ಮೊಸರು ಕುಡಿಕೆ (ದಹಿ ಹಂಡಿ) ಉತ್ಸವದ ವೇಳೆಮುಂಬೈನ ವಿವಿಧೆಡೆ 24 ಮಂದಿ ಬಿದ್ದು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾನವ ಪಿರಮಿಡ್‌ಗಳ ಮೂಲಕ ಎತ್ತರದಲ್ಲಿರುವ ಮೊಸರು ಅಥವಾ ಬೆಣ್ಣೆಯನ್ನು ಒಳಗೊಂಡ ಮಡಕೆಯನ್ನು ತಲುಪಿ ಅದನ್ನು ಒಡೆಯುವ ಉತ್ಸವವೇ ದಹಿ ಹಂಡಿ. ಪಿರಮಿಡ್‌ ರಚಿಸುವವರನ್ನು ‘ಗೋವಿಂದಾ ತಂಡ’ವೆಂದು ಕರೆಯಲಾಗುತ್ತದೆ. ಈ ವೇಳೆ ‘ಗೋವಿಂದ’ ವೇಷಧಾರಿಗಳು ಬಿದ್ದು ಗಾಯಗೊಳ್ಳುವುದು ಸಾಮಾನ್ಯ. ಗಾಯಗೊಂಡ 19 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೃಹನ್ ಮುಂಬೈ ಪಾಲಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.