ADVERTISEMENT

ಲಖಿಂಪುರ ಪ್ರಕರಣ: ಮಿಶ್ರಾ ಜಾಮೀನು ಅರ್ಜಿ ಕುರಿತ ಆದೇಶ ಕಾಯ್ದಿರಿಸಿದ ‘ಸುಪ್ರೀಂ’

ಪಿಟಿಐ
Published 4 ಏಪ್ರಿಲ್ 2022, 12:40 IST
Last Updated 4 ಏಪ್ರಿಲ್ 2022, 12:40 IST
ಆಶೀಶ್‌ ಮಿಶ್ರಾ
ಆಶೀಶ್‌ ಮಿಶ್ರಾ   

ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವರ ಪುತ್ರ ಆಶೀಶ್‌ ಮಿಶ್ರಾ ಅವರಿಗೆ ನೀಡಿದ್ದ ಜಾಮೀನು ರದ್ದತಿ ಕೋರಿದ್ದ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

ಪ್ರಕರಣವನ್ನು ಕುರಿತ ಅಲಹಾಬಾದ್ ಹೈಕೋರ್ಟ್ ಅದೇಶವನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್‌ ನ್ಯಾಯಪೀಠವು, ಜಾಮೀನು ನೀಡುವ ಮೊದಲು ಮರಣೋತ್ತರ ಪರೀಕ್ಷೆ ವರದಿ ಸೇರಿದಂತೆ ಸಾಕ್ಷಿಗಳನ್ನು ವಿವರವಾಗಿ ಪರಿಶೀಲಿಸುವ ಅಗತ್ಯವನ್ನು ಪ್ರಶ್ನಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಹಿಮಾಕೊಹ್ಲಿ ಅವರಿದ್ದ ನ್ಯಾಯಪೀಠವು, ‘ನಾವು ಜಾಮೀನು ಅರ್ಜಿಯನ್ನು ಪರಿಶೀಲಿಸುತ್ತಿದ್ದೇವೆ. ನ್ಯಾಯಮೂರ್ತಿಯು ಮರಣೋತ್ತರ ವರದಿಯನ್ನು ಪರಿಶೀಲಿಸುವುದು ಹೇಗೆ ಸಾಧ್ಯ. ಜಾಮೀನು ಅರ್ಜಿ ಕಾರಣಕ್ಕೆ ಪ್ರಕರಣ, ಗಾಯ ಇತ್ಯಾದಿ ವಿವರಣೆ ಗಮನಿಸುವುದು ಅನಗತ್ಯ’ ಎಂದು ಅಭಿಪ್ರಾಯಪಟ್ಟಿತು.

ADVERTISEMENT

ಪ್ರಕರಣದ ತನಿಖಾ ವರದಿಯ ಬದಲಿಗೆ ಎಫ್‌ಐಆರ್‌ ಅಷ್ಟನ್ನೇ ಗಮನಿಸಿ ಹೈಕೋರ್ಟ್‌ ಜಾಮೀನು ನೀಡಿದೆ ಎಂದು ಈ ಪ್ರಕರಣದಲ್ಲಿ ರೈತರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಶ್ಯಂತ ದವೆ, ವಕೀಲ ಪ್ರಶಾಂತ್ ಭೂಷಣ್‌ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.