ADVERTISEMENT

ಪಾಸ್‌ಪೋರ್ಟ್‌ ಒಪ್ಪಿಸಲು ಲಲಿತ್‌ ಮೋದಿ ಅರ್ಜಿ

ಪಿಟಿಐ
Published 7 ಮಾರ್ಚ್ 2025, 15:56 IST
Last Updated 7 ಮಾರ್ಚ್ 2025, 15:56 IST
ಲಲಿತ್‌ ಮೋದಿ
ಲಲಿತ್‌ ಮೋದಿ   

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಅವ್ಯವಹಾರ ನಡೆಸಿರುವ ಆರೋಪ ಹೊತ್ತಿರುವ ಲಲಿತ್‌ ಮೋದಿ, ಭಾರತದ ಪಾಸ್‌ಪೋರ್ಟ್‌ ಅನ್ನು ಒಪ್ಪಿಸಲು ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ಶುಕ್ರವಾರ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ‘ಲಲಿತ್‌ ಮೋದಿ ಅವರು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಲಾಗುವುದು. ಅವರು ವನುವಾಟು ದೇಶದ ಪೌರತ್ವ ಪಡೆದಿರುವ ಮಾಹಿತಿ ಲಭಿಸಿದೆ. ಆದಾಗ್ಯೂ, ಅವರ ಮೇಲಿನ ಪ್ರಕರಣವನ್ನು ಮುಂದುವರಿಸಲಾಗುವುದು’ ಎಂದು ಜೈಸ್ವಾಲ್‌ ಅವರು ತಿಳಿಸಿದ್ದಾರೆ.

ಐಪಿಎಲ್‌ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಆರೋಪವನ್ನು ಎದುರಿಸುತ್ತಿರುವ ಲಲಿತ್‌ ಮೋದಿ, ಸದ್ಯ ಲಂಡನ್‌ನಲ್ಲಿ ನೆಲಸಿದ್ದಾರೆ ಎಂದು ತಿಳಿದುಬಂದಿದೆ. ಅವರು, 2010ರಲ್ಲಿ ಭಾರತವನ್ನು ತೊರೆದಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.