ADVERTISEMENT

ಲೋಕಪಾಲ್‌: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಪಿಟಿಐ
Published 28 ಸೆಪ್ಟೆಂಬರ್ 2023, 15:21 IST
Last Updated 28 ಸೆಪ್ಟೆಂಬರ್ 2023, 15:21 IST
   

ನವದೆಹಲಿ : ಲೋಕಪಾಲ್‌ನ ಅಧ್ಯಕ್ಷ ಮತ್ತು ಸದಸ್ಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಉನ್ನತ ಮಟ್ಟದ ಶೋಧನಾ ಸಮಿತಿ ವಿಸ್ತರಿಸಿದೆ.

ಸೆ. 28ರವರೆಗೂ ಅರ್ಜಿ ಸಲ್ಲಿಸಲು ಈ ಹಿಂದೆ ಸಮಯ ನಿಗದಿಪಡಿಸಲಾಗಿತ್ತು. ಇದೀಗ ಈ ಅವಧಿಯನ್ನು ಅ.13ರವರೆಗೂ ವಿಸ್ತರಿಸಿದ್ದು ಹೆಚ್ಚಿನ ಅವಧಿಯ ಅವಕಾಶ ಕಲ್ಪಿಸಲಾಗಿದೆ.

ಲೋಕಪಾಲ್, ಅಧ್ಯಕ್ಷರು ಸೇರಿದಂತೆ ಎಂಟು ಸದಸ್ಯರನ್ನು ಹೊಂದಿದೆ. ಇದರಲ್ಲಿ ನಾಲ್ವರು ನ್ಯಾಯಾಂಗ ಮತ್ತು ಇತರರು ನ್ಯಾಯಾಂಗೇತರ ಸದಸ್ಯರು. ಪ್ರಸ್ತುತ ಐದು ಹುದ್ದೆಗಳು ಖಾಲಿಯಿವೆ.

ADVERTISEMENT

45 ವರ್ಷ ಮೇಲ್ಪಟ್ಟ ಅರ್ಹರು ಅರ್ಜಿ ಸಲ್ಲಿಸಬಹುದು. ಅಧಿಕಾರದ ಅವಧಿ ಐದು ವರ್ಷ. 70 ವರ್ಷ ದಾಟಿದರೆ ಸಮಿತಿಯ ಸದಸ್ಯರಾಗುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.