ADVERTISEMENT

ಲತಾ ಮಂಗೇಶ್ಕರ್ ಚೌಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 15:29 IST
Last Updated 28 ಸೆಪ್ಟೆಂಬರ್ 2022, 15:29 IST
ಅಯೋಧ್ಯಾದಲ್ಲಿ ನಿರ್ಮಿಸಲಾಗಿರುವ ಲತಾ ಮಂಗೇಶ್ಕರ್‌ ರಸ್ತೆ ಚೌಕ  –ಪಿಟಿಐ ಚಿತ್ರ
ಅಯೋಧ್ಯಾದಲ್ಲಿ ನಿರ್ಮಿಸಲಾಗಿರುವ ಲತಾ ಮಂಗೇಶ್ಕರ್‌ ರಸ್ತೆ ಚೌಕ  –ಪಿಟಿಐ ಚಿತ್ರ   

ಅಯೋಧ್ಯಾ:ಸುಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್‌ ಹೆಸರಿನಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಸ್ತೆ ಚೌಕವನ್ನು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬುಧವಾರ ಉದ್ಘಾಟಿಸಿದರು.

ಲತಾ ಮಂಗೇಶ್ಕರ್‌ ಅವರ 93ನೇ ಜನ್ಮ ದಿನಾಚರಣೆ ಪ್ರಯುಕ್ತ ಚೌಕ ಲೋಕಾರ್ಪಣೆ ಆಗಿದೆ. ಇದಕ್ಕೆ ‘ಲತಾ ಮಂಗೇಶ್ಕರ್‌ ಚೌರಾಹ’ ಎಂದು ಹೆಸರಿಡಲಾಗಿದೆ. ಸರಯೂ ನದಿ ತೀರದಲ್ಲಿರುವ ಇದರನಿರ್ಮಾಣಕ್ಕೆ ₹7.9 ಕೋಟಿ ವೆಚ್ಚ ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

40 ಅಡಿ ಉದ್ದ, 12 ಮೀಟರ್‌ ಎತ್ತರದ 14 ಟನ್‌ ತೂಕದ ವೀಣೆಯನ್ನು ಈ ವೃತ್ತದಲ್ಲಿ ಸ್ಥಾಪಿಸಲಾಗಿದೆ. ಈ ನಿರ್ಮಾಣವು ಅಯೋಧ್ಯಾದ ಪ್ರಮುಖ ಯೋಜನೆಗಳಲ್ಲಿ ಒಂದು ಎಂದು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸತ್ಯೇಂದ್ರ ಸಿಂಗ್‌ ಅವರು ಹೇಳಿದ್ದಾರೆ.

ADVERTISEMENT

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕೃಷ್ಣಾ ರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.