ADVERTISEMENT

ಕಾನೂನು ಎಲ್ಲರಿಗೂ ಲಭ್ಯವಾಗುವಂತೆ ವಿಕಸನಗೊಳ್ಳಬೇಕು: ನ್ಯಾಯಮೂರ್ತಿ ಸೂರ್ಯಕಾಂತ್‌

ಪಿಟಿಐ
Published 21 ಫೆಬ್ರುವರಿ 2026, 15:26 IST
Last Updated 21 ಫೆಬ್ರುವರಿ 2026, 15:26 IST
<div class="paragraphs"><p>ರಾಜಸ್ಥಾನದ ಕಾನೂನು ಸೇವೆಗಳ ಪ್ರಾಧಿಕಾರಿವು ಜೈಪುರದ ರಾಜಸ್ಥಾನದ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ&nbsp; ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು</p></div>

ರಾಜಸ್ಥಾನದ ಕಾನೂನು ಸೇವೆಗಳ ಪ್ರಾಧಿಕಾರಿವು ಜೈಪುರದ ರಾಜಸ್ಥಾನದ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ  ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು

   

–ಪಿಟಿಐ ಚಿತ್ರ

ಜೋಧಪುರ: ‘ಸಮಾಜವನ್ನು ನಿರಂಕುಶತೆಯಿಂದ ತಡೆಯಲು ಕಾನೂನು ಕೋಟೆಯಾಗಿ ಇರಲು ಸಾಧ್ಯವಿಲ್ಲ’ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ತಿಳಿಸಿದ್ದಾರೆ.

ADVERTISEMENT

ಇಲ್ಲಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಅಂಗವಾಗಿ ‘ಕೋಟೆಯಿಂದ ವೇದಿಕೆಗೆ– ಅಪೂರ್ಣ ಗಣರಾಜ್ಯದಲ್ಲಿ ಕಾನೂನು’ ಕುರಿತಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ವೃತ್ತಿಪರ ವಕೀಲರು ಕಾನೂನನ್ನು ಮುಚ್ಚಿದ ಕೋಟೆಯಾಗಿ ನೋಡದೆ, ಜೀವಂತ ಹಾಗೂ ವಿಕಸಿಸುತ್ತಿರುವ ಸಾರ್ವಜನಿಕ ವೇದಿಕೆಯಾಗಿ ನೋಡಬೇಕು’ ಎಂದು ಸಲಹೆ ನೀಡಿದರು.

ಮೆಹಾರ್‌ಘಡದ ಕೋಟೆಯನ್ನು ಕಾನೂನಿನ ಐತಿಹಾಸಿಕ ಪ್ರಯಾಣದ ಪ್ರಬಲ ರೂಪಕವಾಗಿ ಸಿಜೆಐ ಉದಾಹರಿಸಿದರು.

‘ಅವ್ಯವಸ್ಥೆ ಹಾಗೂ ಅನಿಶ್ಚಿತತೆಯಿಂದ ರಕ್ಷಿಸಲು ಕೋಟೆಯನ್ನು ನಿರ್ಮಿಸಲಾಗುತ್ತದೆ. ಸಮಾಜವನ್ನು ನಿರಂಕುಶತೆ ಹಾಗೂ ಅವ್ಯವಸ್ಥೆಯಿಂದ ರಕ್ಷಿಸಲು ಕಾನೂನು ಕೂಡ ಅಂತಹ ರಚನೆಯನ್ನು ಹೋಲುತ್ತದೆ’ ಎಂದು ಹೇಳಿದ್ದಾರೆ.

‘ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಕಾನೂನು ಎಂಬುದು ಕೋಟೆಯಾಗಿ ಉಳಿಯಲು ಸಾಧ್ಯವಿಲ್ಲ. ಭಿನ್ನಾಭಿಪ್ರಾಯಗಳನ್ನು ಚರ್ಚಿಸುವ, ಹಕ್ಕು ಹಾಗೂ ಅಧಿಕಾರವನ್ನು ಸಮರ್ಥಿಸುವ ವೇದಿಕೆಯಾಗಿ ರೂಪುಗೊಳ್ಳಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.