ADVERTISEMENT

₹13,000ಕ್ಕೆ ಹರಾಜಾದ ಒಂದು ನಿಂಬೆಹಣ್ಣು

ಪಿಟಿಐ
Published 17 ಫೆಬ್ರುವರಿ 2026, 14:04 IST
Last Updated 17 ಫೆಬ್ರುವರಿ 2026, 14:04 IST
_
_   

ಈರೋಡ್: ಜಿಲ್ಲೆಯ ಪಳಂತಿನ್ನಿ ಕರುಪ‍್ಪ ಈಶ್ವರನ್ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಆಚರಣೆಯ ಅಂಗವಾಗಿ ನಡೆದ ಹರಾಜಿನಲ್ಲಿ ಒಂದು ನಿಂಬೆಹಣ್ಣಿಗೆ ₹13,000 ಮೌಲ್ಯ ನಿಗದಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಳಕ್ಕೇತಿ ಗ್ರಾಮದ ಬಳಿಯ ಪುದು ಅಣ್ಣಾಮಲೈ ಪಾಳಯಂನಲ್ಲಿರುವ ಈ ದೇವಾಲಯದ ಪ‍್ರಧಾನ ದೇವರನ್ನು ಅಲಂಕರಿಸಿದ್ದ ಬೆಳ್ಳಿ ಉಂಗುರ, ಬೆಳ್ಳಿ ನಾಣ್ಯ ಮತ್ತು ನಿಂಬೆಹಣ್ಣನ್ನು ಹರಾಜಿಗೆ ಇಡಲಾಗಿತ್ತು.

ವಡುಗಪಟ್ಟಿ ಗ್ರಾಮದ ವಿಶ್ವನಾಥನ್ ಎಂಬವರು ನಿಂಬೆಹಣ್ಣನ್ನು ದಾಖಲೆ ಬೆಲೆಗೆ‌ ಹರಾಜು ಕೂಗಿ, ಪಡೆದುಕೊಂಡರು. ಸ್ಥಳೀಯ ನಿವಾಸಿ ಪರಮಶಿವಂ ₹33,000ಕ್ಕೆ ಹರಾಜು ಕೂಗಿ ಬೆಳ್ಳಿ ಉಂಗುರವನ್ನು ಪಡೆದುಕೊಂಡರೆ, ₹43,000 ನೀಡಿ ಅತ್ತಪ್ಪಂಪಾಳಯಂ ಗ್ರಾಮದ ದುರೈ ಅವರು ಬೆಳ್ಳಿ ನಾಣ್ಯವನ್ನು ತಮ್ಮದಾಗಿಸಿಕೊಂಡರು.

ADVERTISEMENT

ಹರಾಜಿನಲ್ಲಿ ಬರುವ ಹಣವನ್ನು ದೇವಾಲಯದ ಅಭಿವೃದ್ಧಿ ಮತ್ತು ವಿಶೇಷ ಪೂಜೆಗಳಿಗೆ ಬಳಸಲಾಗುವುದು ಎಂದು ದೇವಾಲಯದ ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.