ADVERTISEMENT

ಶಿವಸೇನಾ ಮುಖಂಡನ ಕೊಲೆ ಪ್ರಕರಣದಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 11:05 IST
Last Updated 21 ಜೂನ್ 2025, 11:05 IST
<div class="paragraphs"><p>ಹತ್ಯೆ</p></div>

ಹತ್ಯೆ

   

ಠಾಣೆ: ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದ್ದ ಶಿವಸೇನಾ ನಾಯಕ ಮೋಹನ್ ರಾವತ್ ಕೊಲೆ ಪ್ರಕರಣದಲ್ಲಿ ನಾಲ್ವರಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ವಿಶೇಷ ನ್ಯಾಯಾಧೀಶ ಎ.ಎನ್. ಸಿರ್ಸಿಕರ್ ಅವರು ಶನಿವಾರ ತೀರ್ಪು ಪ್ರಕಟಿಸಿದರು. 

ADVERTISEMENT

ಚಂದ್ರಕಾಂತ್ (39), ಗಂಗಾರಾಮ್ (44), ಯೋಗೇಶ್ ನಾರಾಯಣ್ ರಾವತ್ (45), ಮತ್ತು ಅಜಯ್ ಗುರವ್ (37)ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ₹ 5000 ದಂಡ ವಿಧಿಸಲಾಗಿದ್ದು ಪಾವತಿಸದಿದ್ದರೆ ಮೂರು ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಶಿವಸೇನೆಯ ಬದ್ಲಾಪುರ ನಗರ ಘಟಕದ ಉಪಮುಖ್ಯಸ್ಥರಾಗಿದ್ದ ಮೋಹನ್ ರಾವತ್ ಅವರನ್ನು 2014ರ ಮೇ 23, ರಾತ್ರಿ ಕಚೇರಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.