ADVERTISEMENT

ನದಿ ಜೋಡಣೆ: ಜಲಶಕ್ತಿ ಸಚಿವಾಲಯದ ಸಭೆ ಆರಂಭ

ಪೆನ್ನಾರ್- ಕಾವೇರಿ ಜೋಡಣೆ: ನೀರು ಹಂಚಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 10:27 IST
Last Updated 18 ಫೆಬ್ರುವರಿ 2022, 10:27 IST
   

ನವದೆಹಲಿ: ಕೇಂದ್ರದ ಪ್ರಸ್ತಾವಿತ. ನದಿ ಜೋಡಣೆ ಯೋಜನೆ ಜಾರಿ ಕುರಿತು ಸಂಬಂಧಿಸಿದ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ‌ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರದ ಜಲಶಕ್ತಿ ಸಚಿವಾಲಯದಲ್ಲಿ ಶುಕ್ರವಾರ‌ ಮಧ್ಯಾಹ್ನ ಸಭೆ ಆರಂಭವಾಗಿದೆ.

ಗೋದಾವರಿ- ಕೃಷ್ಣಾ, ಕೃಷ್ಣಾ- ಪೆನ್ನಾರ್ ಹಾಗೂ ಪೆನ್ನಾರ್- ಕಾವೇರಿ ನದಿಗಳ ಜೋಡಣೆಗೆ ಸಂಬಂಧಿಸಿದಂತೆ ಆಯಾ ರಾಜ್ಯಗಳ ಒಪ್ಪಿಗೆ ಅಗತ್ಯವಿದೆ.

ಈ ಸಂಬಂಧ ಚರ್ಚಿಸಲು ಆರಂಭವಾಗಿರುವ ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ADVERTISEMENT

ಗೋದಾವರಿ- ಕೃಷ್ಣಾ ನದಿ ಜೋಡಣೆ‌ಗೆ ತೆಲಂಗಾಣ ಸರ್ಕಾರವು ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೃಷ್ಣಾ- ಪೆನ್ನಾರ್ ಹಾಗೂ ಪೆನ್ನಾರ್- ಕಾವೇರಿ ನದಿ ಜೋಡಣೆ ಯೋಜನೆ ಕೈಗೆ‌ತ್ತಿಕೊಳ್ಳುವ ಮೊದಲು ಆಯಾ ರಾಜ್ಯಗಳಿಗೆ ಸಮನಾಗಿ ನೀರು ಹಂಚಿಕೆ ಮಾಡುವಂತೆ ಕರ್ನಾಟಕ ಒತ್ತಾಯಿಸಿದೆ.

ಆಂದ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳೂ ನೀರಿನ ಹಂಚಿಕೆಗೆ ಒತ್ತಾಯಿಸಿದೆ.

ಜಲಶಕ್ತಿ ಸಚಿವಾಲಯದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.