ADVERTISEMENT

2030ರ ವೇಳೆಗೆ ದೇಶದ ಎಲ್‌ಎನ್‌ಜಿ ಆಮದು ಸಾಮರ್ಥ್ಯ 66.7 ದಶಲಕ್ಷಕ್ಕೆ ‌ಹೆಚ್ಚಳ

ಪಿಟಿಐ
Published 2 ಸೆಪ್ಟೆಂಬರ್ 2025, 8:55 IST
Last Updated 2 ಸೆಪ್ಟೆಂಬರ್ 2025, 8:55 IST
   

ನವದೆಹಲಿ: 2030ರ ವೇಳೆಗೆ ದೇಶದ ನೈಸರ್ಗಿಕ ಅನಿಲದ ಅಮದು ಪ್ರಮಾಣ ಶೇ 27 ಕ್ಕೆ ಏರಿಕೆಯಾಗಲಿದೆ. ಪ್ರತಿ ವರ್ಷ ದೇಶದಲ್ಲಿ 66.7 ದಶಲಕ್ಷ ಮೆಟ್ರಿಕ್‌ ಟನ್‌ ನೈಸರ್ಗಿಕ ಅನಿಲ ಅಮದು ಮಾಡಿಕೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. 

ದೇಶದಲ್ಲಿ ಹೊಸದಾಗಿ ಎರಡು ಎಲ್‌ಎನ್‌ಜಿ ಟರ್ಮಿನಲ್‌ಗಳನ್ನು ಸ್ಥಾಪನೆ ಮಾಡಲಾಗುತ್ತದೆ. ವಿಶ್ವದ ನಾಲ್ಕನೇ ಅತಿದೊಡ್ಡ ಅನಿಲ ಆಮದುದಾರ ರಾಷ್ಟ್ರವಾದ ಭಾರತವು ಸದ್ಯ ಎಂಟು ಎಲ್‌ಎನ್‌ಜಿ ಟರ್ಮಿನಲ್‌ಗಳನ್ನು ಹೊಂದಿದೆ. ಅದರಿಂದ ವರ್ಷಕ್ಕೆ 52.7 ದಶಲಕ್ಷ ಟನ್‌ ಪ್ರಮಾಣದ ಅನಿಲ ಉತ್ಪಾದನೆಯಾಗುತ್ತದೆ ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. 

ಹಸಿರುಮನೆ ಅನಿಲಗಳನ್ನು ಹೊರಸೂಸುವ ದೇಶಗಳಲ್ಲಿ ಒಂದಾದ ಭಾರತವು 2070 ರ ವೇಳೆಗೆ ನಿವ್ವಳ-ಶೂನ್ಯ ಗುರಿಯನ್ನು ಹೊಂದಿದೆ. ವಾಹನಗಳಿಗೆ ಎಲ್‌ಎನ್‌ಜಿ ವಿತರಣಾ ಕೇಂದ್ರಗಳನ್ನು 1,000 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದೇ ಡಿಸೆಂಬರ್ ವೇಳೆಗೆ 13 ರಿಂದ 49 ಎಲ್‌ಎನ್‌ಜಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯಿದೆ ಎಂದು ಪುರಿ ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.