ADVERTISEMENT

ಬಂಧನ ಕಾನೂನುಬಾಹಿರ: ಕೋರ್ಟ್ ಮೆಟ್ಟಿಲೇರಿದ ಚಂದಾ ಕೊಚ್ಚರ್ ದಂಪತಿ

ಪಿಟಿಐ
Published 27 ಡಿಸೆಂಬರ್ 2022, 11:44 IST
Last Updated 27 ಡಿಸೆಂಬರ್ 2022, 11:44 IST
ಚಂದಾ ಕೊಚ್ಚರ್
ಚಂದಾ ಕೊಚ್ಚರ್   

ಮುಂಬೈ(ಪಿಟಿಐ): ಐಸಿಐಸಿಐ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಸಿಬಿಐ ತಮ್ಮನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್‌ ಹೇಳಿದ್ದಾರೆ.

ಬಂಧನ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಅವರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ತಕ್ಷಣ ಅರ್ಜಿ ವಿಚಾರಣೆಗೆ ಕೋರ್ಟ್ ನಿರಾಕರಿಸಿದೆ. ರಜೆ ಅವಧಿಯ ಬಳಿಕ ನಿಯಮಿತ ಪೀಠಕ್ಕೆ ಮನವಿ ಸಲ್ಲಿಸಬಹುದು ಎಂದೂ ಸಲಹೆ ಮಾಡಿದೆ.

ಕೊಚ್ಚರ್ ಅವರನ್ನು ಪ್ರತಿನಿಧಿಸಿದ್ದ ವಕೀಲರು, ಕಾಯ್ದೆ ಅನುಸಾರ ಬಂಧನಕ್ಕೆ ಮೊದಲುಸಿಬಿಐ ಅನುಮತಿ ಪಡೆದಿರಲಿಲ್ಲ. ಶುಕ್ರವಾರದಂದು ಅಲ್ಪಕಾಲದ ವಿಚಾರಣೆಯ ಹಿಂದೆಯೇ ಬಂಧಿಸಿತು ಎಂದು ಹೇಳಿದರು.

ADVERTISEMENT

2019ರಲ್ಲಿ ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಕೊಚ್ಚರ್ ದಂಪತಿ, ವಿಡಿಯೊಕಾನ್‌ ಸಂಸ್ಥೆಯ ಸ್ಥಾಪಕ ವೇಣುಗೋಪಾಲ್ ಧೂತ್, ದೀಪಕ್‌ ನಿರ್ವಹಿಸುತ್ತಿರುವ ನೂಪವರ್‌ ರಿನೀವಬಲ್, ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಟೆಡ್, ವಿಡಿಯೊಕಾನ್‌ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್, ವಿಡಿಯೊಕಾನ್ ಇಂಡಸ್ಟ್ರೀಸ್‌ ಅನ್ನು ಸಿಬಿಐ ಹೆಸರಿಸಿದೆ.

ಐಸಿಐಸಿಐ ಬ್ಯಾಂಕ್‌ಕಾಯ್ದೆ ಉಲ್ಲಂಘಿಸಿ ವಿಡಿಯೊಕಾನ್‌ ಸಮೂಹ ಸಂಸ್ಥೆಗೆ ₹ 3,250 ಕೋಟಿ ಮಂಜೂರು ಮಾಡಿದೆ ಎಂದು ಸಿಬಿಐ ಆರೋಪಿಸಿದೆ.ಸಿಬಿಐ ಡಿ.28ರವರೆಗೆ ಕೊಚ್ಚರ್ ದಂಪತಿ, ಧೂತ್‌ರನ್ನು ವಶಕ್ಕೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.