ADVERTISEMENT

ಲಾಕ್‌ಡೌನ್‌: ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ನೆರವಾದ ಮುಸ್ಲಿಮರು

ಪಿಟಿಐ
Published 9 ಏಪ್ರಿಲ್ 2020, 12:29 IST
Last Updated 9 ಏಪ್ರಿಲ್ 2020, 12:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬಾಂದ್ರಾದ ಗರೀಬ್ ನಗರ ಪ್ರದೇಶದಲ್ಲಿ ಅನಾರೋಗ್ಯದಿಂದ ಮೃತಪಟ್ಟ ವೃದ್ಧರೊಬ್ಬರ ಅಂತ್ಯಕ್ರಿಯೆಗೆ ಮುಸ್ಲಿಂ ಸಮುದಾಯದವರು ನೆರವಾಗಿದ್ದಾರೆ.

ರಾಜಸ್ಥಾನದ ಪ್ರೇಮಚಂದ್ರ ಬುದ್ಧಲಾಲ್ ಮಹಾವೀರ್(68) ಮೃತಪಟ್ಟವರು. ಲಾಕ್‌ಡೌನ್‌ ಇರುವುದರಿಂದ ಅವರ ಸಂಬಂಧಿಕರಿಗೆ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ ಹೀಗಾಗಿ, ಅಂತ್ಯಕ್ರಿಯೆ ನೆರವೇರಿಸಲು ಮೃತರ ಮಗನಿಗೆ ನೆರಹೊರೆಯ ಮುಸ್ಲಿಮರು ನೆರವು ನೀಡಿದ್ದಾರೆ.

‘ರಾಮ್ ನಾಮ್ ಸತ್ಯ ಹೈ’ ಎಂದು ಜಪಿಸುತ್ತಾ ಮುಸ್ಲಿಂ ಸಮುದಾಯದವರು ಸ್ಮಶಾನಕ್ಕೆ ಶವ ಹೊತ್ತು ಸಾಗಿದ್ದಾರೆ.

ADVERTISEMENT

‘ಇಂತಹ ಸಮಯದಲ್ಲಿ, ಧಾರ್ಮಿಕ ಅಡೆತಡೆಗಳನ್ನು ಮೀರಿದ ಮಾನವೀಯತೆಯನ್ನು ನಾವು ತೋರಿಸಬೇಕು’ ಎಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಯೂಸೂಫ್‌ ಸಿದ್ದಿಕಿ ಷೈಕ್‌ ತಿಳಿಸಿದ್ದಾರೆ.

‘ಅಂತಿಮ ವಿಧಿವಿಧಾನದ ಜೊತೆ ಮರಣ ಸಂಬಂಧಿ ದಾಖಲೆ ತೆಗೆದುಕೊಳ್ಳಲು ನೆರೆಮನೆಯವರು ನೆರವಾದರು’ ಎಂದು ಮೃತರ ಮಗ ಮೋಹನ್‌ ಮಹಾವೀರ್‌ ತಿಳಿಸಿದ್ದಾರೆ.

ಪ್ರೇಮಚಂದ್ರ ಬುದ್ಧಲಾಲ್ ಮಹಾವೀರ್ ಕಳೆದ ಶುಕ್ರವಾರ ಮೃತಪಟ್ಟಿದ್ದರು. ಮರು ದಿನ ಶನಿವಾರವೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಘಟನೆ ತಡವಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.