ADVERTISEMENT

ಮೇ 3ರವರೆಗೂ ಲಾಕ್‌ಡೌನ್‌ ಮುಂದುವರೆಸಲು ಪ್ರಧಾನಿಗೆ ಮನವಿ: ತೆಲಂಗಾಣ ಸಿಎಂ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 16:15 IST
Last Updated 6 ಏಪ್ರಿಲ್ 2020, 16:15 IST
   

ಹೈದರಾಬಾದ್‌: ದೇಶದಾದ್ಯಂತ ಲಾಕ್‌ಡೌನ್ ವಿಸ್ತರಿಸಲು ಪ್ರಧಾನಿ ಮೋದಿಯವರಿಗೆ ಮನವಿ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಹೇಳಿದ್ದಾರೆ.

ಈಗಿರುವ ಏಪ್ರಿಲ್ 14ರ ಲಾಕ್‌ಡೌನ್ ಗಡುವನ್ನು ಮುಂದಿನ ಎರಡು ವಾರಗಳ ಕಾಲ ವಿಸ್ತರಿಸುವಂತೆ ಪ್ರಧಾನಿ ಮೋದಿಯವರಿಗೆ ಮನವಿ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸೋಮವಾರ ಸಂಜೆ ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಕೊರೊನಾ ವೈರಸ್‌ ಸೋಂಕು ಹರಡುವಿಕೆ ತಡೆಗಟ್ಟಲು ಮೇ.3ರವರೆಗೆ ಲಾಕ್‌ಡೌನ್ ಅನ್ನು ಮುಂದುವರೆಸುವ ಬಗ್ಗೆ ಯೋಚಿಸಲಾಗುತ್ತಿದೆಎಂದು ಚಂದ್ರಶೇಖರ್ ರಾವ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.