ADVERTISEMENT

ಸೇನಾ ಸಲಕರಣೆಗಳ ಸಾಗಣೆ: ಭಾರತಕ್ಕೆ ಸಿ–130ಜೆ ನೀಡಲು ಮುಂದಾದ ಲಾಕ್‌ಹೀಡ್‌

ಪಿಟಿಐ
Published 28 ಡಿಸೆಂಬರ್ 2025, 16:02 IST
Last Updated 28 ಡಿಸೆಂಬರ್ 2025, 16:02 IST
   

ಮೆರಿಯಾಟಾ(ಅಮೆರಿಕ): ಸೇನಾ ಸಲಕರಣೆಗಳ ಸಾಗಣೆಗಾಗಿ 80 ವಿಮಾನಗಳ ಖರೀದಿಗೆ ಭಾರತ ಸಿದ್ಧತೆ ನಡೆಸುತ್ತಿದ್ದು, ಅಮೆರಿಕದ ಪ್ರಮುಖ ಏರೊಸ್ಪೇಸ್‌ ಕಂಪನಿ ಲಾಕ್‌ಹೀಡ್ ಮಾರ್ಟಿನ್‌ ತನ್ನ ಸಿ–130ಜೆ ಸೂಪರ್‌ ಹೆರ್ಕ್ಯುಲಸ್‌ ನೀಡಲು ಮುಂದೆ ಬಂದಿದೆ.

ಕ್ವಾಡ್ ಸದಸ್ಯ ರಾಷ್ಟ್ರಗಳಿಗೆ ಕಂಪನಿಯು ಬಲಿಷ್ಠವಾದ ವಿಮಾನವನ್ನು ಪೂರೈಕೆ ಮಾಡಲಿದೆ ಎಂದು ಲಾಕ್‌ಹೀಡ್‌ ತಿಳಿಸಿದೆ.

‘ಲಾಕ್‌ಹೀಡ್‌ಗೆ ವಿಮಾನ ಪೂರೈಕೆ ಮಾಡುವ ಅವಕಾಶ ಲಭಿಸಿದಲ್ಲಿ ಭಾರತದಲ್ಲಿ ಅದು ತನ್ನ ಕೇಂದ್ರವನ್ನು ಆರಂಭಿಸಲಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಅಮೆರಿಕದಿಂದ ಆಚೆಗೆ ಲಾಕ್‌ಹೀಡ್‌ನ ಕೇಂದ್ರವು ಆರಂಭವಾಗಲಿದೆ’ ಎಂದು ಕಂಪನಿಯ ಉನ್ನತ ಅಧಿಕಾರಿ ತಿಳಿಸಿದರು.

ADVERTISEMENT

ಲಾಕ್‌ಹೀಡ್ ಮಾರ್ಟಿನ್‌ ಕಂಪನಿಯು ಈವರೆಗೆ 560 ಸಿ–130ಜೆ ಸೂಪರ್ ಹೆರ್ಕ್ಯುಲಸ್‌ ವಿಮಾನಗಳನ್ನು ವಿವಿಧ ದೇಶಗಳಿಗೆ ಪೂರೈಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.