ADVERTISEMENT

ಗುರುಗ್ರಾಮದಲ್ಲಿ ಮಿಡತೆಗಳ ಹಾವಳಿ

ಪಿಟಿಐ
Published 27 ಜೂನ್ 2020, 10:38 IST
Last Updated 27 ಜೂನ್ 2020, 10:38 IST
ಮಿಡತೆ
ಮಿಡತೆ   

ಗುರುಗ್ರಾಮ‌, ನವದೆಹಲಿ: ಮಿಡತೆಗಳ ಗುಂಪುಗಳು ಶನಿವಾರ ಗುರುಗ್ರಾಮದತ್ತ ಧಾವಿಸಿ ಬಂದಿದ್ದರಿಂದ ಹಲವೆಡೆ ಕತ್ತಲೆ ಆವರಿಸಿದಂತಹ ವಾತಾವರಣ ಸೃಷ್ಟಿಯಾಗಿತ್ತು.

‘ಗುರುಗ್ರಾಮಕ್ಕೆ ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಮಿಡತೆಗಳು ಧಾವಿಸಿ ಬಂದವು. ಸುಮಾರು ಎರಡು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಮಿಡತೆಗಳು ಆವರಿಸಿಕೊಂಡಿದ್ದವು. ದೆಹಲಿ–ಗುರುಗ್ರಾಮ ಗಡಿಯವರೆಗೆ ಮಿಡತೆಗಳಿದ್ದವು. ಆದರೆ, ದೆಹಲಿ ಪ್ರವೇಶಿಸಿಲ್ಲ’ ಎಂದು ಕೃಷಿ ಸಚಿವಾಲಯದ ಮಿಡತೆ ಎಚ್ಚರಿಕೆ ಸಂಸ್ಥೆಯ ಕೆ.ಎಲ್‌. ಗುರ್ಜಾರ್‌ ತಿಳಿಸಿದ್ದಾರೆ.

ಮಿಡತೆಗಳುಹರಿಯಾಣದ ಪಾಲ್ವಾಲ್ ಕಡೆಗೆ ಸಾಗುತ್ತಿವೆ ಎಂದು ಅವರು ತಿಳಿಸಿದರು.

ADVERTISEMENT

ಈ ಮಿಡತೆಗಳು ಮನೆಯ ಮೇಲ್ಛಾವಣಿ, ಮರ–ಗಿಡಗಳಲ್ಲಿ ಬೀಡು ಬಿಟ್ಟಿರುವ ವಿಡಿಯೊವನ್ನು ಗುರುಗ್ರಾಮದ ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗುರುಗ್ರಾಮದಲ್ಲಿ ಮಿಡತೆಗಳು ದಾಳಿ ನಡೆಸಿದ್ದರಿಂದ ದೆಹಲಿ ಪರಿಸರ ಸಚಿವ ಗೋಪಾಲ್‌ ರಾಯ್‌ ಶನಿವಾರ ಅಧಿಕಾರಿಗಳ ತುರ್ತು ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಹರಿಯಾಣ ಸರ್ಕಾರವು ಸಹ ಕಟ್ಟೆಚ್ಚರ ಘೋಷಿಸಿದೆ. ಮಿಡತೆಗಳನ್ನು ನಿಯಂತ್ರಿಸಲು ಟ್ರ್ಯಾಕ್ಟರ್‌ ಮೂಲಕ ರಾಸಾಯನಿಕಗಳನ್ನು ಸಿಂಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.