ADVERTISEMENT

ಉತ್ತರ ಪ್ರದೇಶ | ಬಂಡಾ ನಗರದತ್ತ ಸಾಗುತ್ತಿದೆ ಮಿಡತೆಗಳ ಹಿಂಡು

ಪಿಟಿಐ
Published 13 ಜೂನ್ 2020, 15:38 IST
Last Updated 13 ಜೂನ್ 2020, 15:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಂಡಾ: ಮಿಡತೆಗಳ ದಾಳಿಯು ಉತ್ತರ ಪ್ರದೇಶದ ಬಂಡಾ ನಗರ ಸಮೀಪಿಸುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ಷಾಂತರ ಮಿಡತೆಗಳು ಜಿಲ್ಲೆಯ ಮಜೀವಾ ಸಾನಿ ಗ್ರಾಮದ ವೈದಾನ್ ಪೂರ್ವಾ ಗ್ರಾಮದ ಬೆಳೆಗಳು, ಸಸ್ಯಗಳು ಮತ್ತು ಮರಗಳ ಮೇಲೆ ದಾಳಿ ನಡೆಸಿದ್ದವು ಎಂದು ಜಿಲ್ಲಾ ಕೃಷಿ ಅಧಿಕಾರಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.

ಕೃಷಿ ಇಲಾಖೆ ಮತ್ತು ಜಿಲ್ಲಾಡಳಿತ ಕೀಟನಾಶಕಗಳನ್ನು ಸಿಂಪಡಿಸುವ ಮೂಲಕ ಮಿಡತೆಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿದೆ ಎಂದಿರುವ ಅವರು, ಈ ಮಿಡತೆಗಳೀಗ ಬಿಸಂಡಾ ಪಟ್ಟಣ ಮತ್ತು ಬಂಡಾ ನಗರಗಳತ್ತ ಮುಖಮಾಡಿವೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.