
ಪ್ರಜಾವಾಣಿ ವಾರ್ತೆ
ಕಡಪ (ಆಂಧ್ರ ಪ್ರದೇಶ): ಪೂತಲಪಟ್ಟು ಶಾಸಕ ಎಂ.ಎಸ್. ಬಾಬು ಅವರು ಆಡಳಿತಾರೂಢ ವೈಎಸ್‌ಆರ್‌ಸಿಪಿ ತೊರೆದು ಶನಿವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಎಪಿಸಿಸಿ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರ ಸಮ್ಮುಖದಲ್ಲಿ ಬಾಬು ಅವರು ಪಕ್ಷಕ್ಕೆ ಸೇರಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಾಬು ಅವರಿಗೆ ವೈಎಸ್‌ಆರ್‌ಸಿಪಿ ಟಿಕೆಟ್ ನಿರಾಕರಿಸಿತ್ತು.
ಚುನಾವಣೆಗೂ ಮುನ್ನ ಬಾಬು ಅವರು ಕಾಂಗ್ರೆಸ್‌ಗೆ ಸೇರಿರುವುದರಿಂದ ವೈಎಸ್‌ಆರ್‌ಸಿಪಿಗೆ ಹಿನ್ನಡೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಶರ್ಮಿಳಾ ಅವರು ಬಾಬು ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದರು ಎಂದೂ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.