ADVERTISEMENT

Parliament Special Session: ನಿಗದಿಗಿಂತ ಹೆಚ್ಚು ಕಾಲ ಕಲಾಪ

ಸಂಸತ್‌ನ ವಿಶೇಷ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 15:26 IST
Last Updated 22 ಸೆಪ್ಟೆಂಬರ್ 2023, 15:26 IST
<div class="paragraphs"><p>ಪಿಟಿಐ ಚಿತ್ರ</p></div>

ಪಿಟಿಐ ಚಿತ್ರ

   

ನವದೆಹಲಿ: ಸಂಸತ್‌ನ ವಿಶೇಷ ಅಧಿವೇಶನದ ವೇಳೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಿಗದಿತ ಅವಧಿಗಿಂತ ಹೆಚ್ಚು ಕಾಲ ಕಲಾಪ ನಡೆದಿದೆ ಎಂದು ‘ಪಿಆರ್‌ಎಸ್‌ ಲೆಜಿಸ್ಲೇಟಿವ್ ರಿಸರ್ಚ್’ ಸಂಸ್ಥೆ ಹೇಳಿದೆ.

17ನೇ ಲೋಕಸಭೆಯಲ್ಲಿ ಕಲಾಪವನ್ನು ಮುಂದೂಡುವ ಮೂಲಕ ಸಮಯ ವ್ಯರ್ಥವಾಗದ ಏಕೈಕ ಅಧಿವೇಶನ ಇದಾಗಿದೆ ಎಂದಿದೆ.

ADVERTISEMENT

ಲೋಕಸಭೆಯಲ್ಲಿ 22 ಗಂಟೆ 45 ನಿಮಿಷಗಳ ನಿಗದಿತ ಅವಧಿಗಿಂತ, ಎಂಟು ಗಂಟೆಗೂ ಹೆಚ್ಚು ಕಾಲ ಕಲಾಪ ನಡೆದಿದೆ. ರಾಜ್ಯಸಭೆಯಲ್ಲಿ ನಿಗದಿತ ಅವಧಿ 21 ಗಂಟೆ 45 ನಿಮಿಷವಾಗಿದ್ದರೂ, 27 ಗಂಟೆ 44 ನಿಮಿಷ ಕಲಾಪ ನಡೆದಿದೆ ಎಂದು ಸಂಸ್ಥೆ ತಿಳಿಸಿದೆ.

ನಿಗದಿತ ವೇಳಾಪಟ್ಟಿಯ ಪ್ರಕಾರ ಶುಕ್ರವಾರ ಅಂತ್ಯಗೊಳ್ಳಬೇಕಾಗಿದ್ದ ಅಧಿವೇಶನವು ಒಂದು ದಿನ ಮೊದಲೇ ಅಂತ್ಯಗೊಂಡಿದೆ. ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ. ಅಲ್ಲದೆ ಚಂದ್ರಯಾನ–3 ಯಶಸ್ಸು, ಸಂಸತ್ತಿನ 75 ವರ್ಷದ ಸಾಧನೆ ಕುರಿತೂ ಚರ್ಚೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.