ADVERTISEMENT

ದೆಹಲಿಯಲ್ಲಿ ಮೈಕೊರೆವ ಚಳಿ: ಬಡವರಿಗಾಗಿ ಬ್ಲಾಂಕೆಟ್ ಬ್ಯಾಂಕ್ ಉದ್ಘಾಟಿಸಿದ ಬಿರ್ಲಾ

ಪಿಟಿಐ
Published 27 ಡಿಸೆಂಬರ್ 2022, 2:07 IST
Last Updated 27 ಡಿಸೆಂಬರ್ 2022, 2:07 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಬ್ಲಾಂಕೆಟ್ ಬ್ಯಾಂಕ್‌ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಚಾಲನೆ ನೀಡಿದ್ದಾರೆ.

ದೆಹಲಿಯಲ್ಲಿ ಉಷ್ಣಾಂಶ ತೀವ್ರಗತಿಯಲ್ಲಿ ಕುಸಿಯುತ್ತಿದ್ದು, ಅಗತ್ಯವಿರುವ ಬಡವರಿಗೆ ಉಚಿತವಾಗಿ ಬ್ಲಾಂಕೆಟ್ ವಿತರಿಸುವುದು ಈ ಬ್ಯಾಂಕ್‌ನ ಉದ್ದೇಶವಾಗಿದೆ.

‘ದೆಹಲಿಯಲ್ಲಿ ತಾಪಮಾನ ತೀವ್ರವಾಗಿ ಕುಸಿದಿದೆ. ಬಡವರು ಮತ್ತು ನೆರವು ಅಗತ್ಯವಿರುವ ಜನರ ಬಗ್ಗೆ ಸೂಕ್ತ ಗಮನ ಹರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಬ್ಲಾಂಕೆಟ್‌ಗಳು ಚಳಿಗಾಲದಲ್ಲಿ ಅವರ ನೆರವಿಗೆ ಬರುತ್ತವೆ’ ಎಂದು ಅವರು ಹೇಳಿದರು.

ADVERTISEMENT

ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಸಮಾಜದ ಪ್ರಗತಿ ಮತ್ತು ಕಲ್ಯಾಣಕ್ಕೆ ಶ್ರಮಿಸಬೇಕು ಎಂದು ಬಿರ್ಲಾ ಸಲಹೆ ನೀಡಿದರು.

ಸ್ಥಳೀಯ ಮಟ್ಟದಲ್ಲಿ ಸಹಕಾರ, ಸಮ್ಮತಿ ಮತ್ತು ಸಾಮೂಹಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಸಸಿ ನೆಡುವ, ಶುಚಿತ್ವ ಕಾಪಾಡುವ ಮತ್ತು ವಯಸ್ಕ ಶಿಕ್ಷಣದತ್ತ ತೊಡಗಿಸಿಕೊಳ್ಳಬೇಕಿದೆ ಎಂದೂ ಅವರು ಅಭಿ‍ಪ್ರಾಯಪಟ್ಟಿದ್ದಾರೆ.

ಬಡವರಿಗೆ ಉಚಿತ ಬ್ಲಾಂಕೆಟ್ ಒದಗಿಸುವ ದೃಷ್ಟಿಯಿಂದ ಆವ್ ಸಾಥ್ ಚಲೆನ್ ಸಂಘಟನೆ ಈ ಬ್ಲಾಂಕೆಟ್ ಬ್ಯಾಂಕ್ ಆರಂಭಿಸಿದೆ. ಸಂಘಟನೆಯ ರಾಷ್ಟ್ರೀಯ ಸಂಚಾಲಕ ವಿಷ್ಣು ಮಿತ್ತಲ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.