rip
ಚಿತ್ರ: ಡೆಕ್ಕನ್ ಹೆರಾಲ್ಡ್
ಪುಣೆ: ಲೋಕಮಾನ್ಯ ಬಾಲಗಂಗಾಧರ ತಿಲಕರ ಮರಿಮೊಮ್ಮಗ ಮತ್ತು ಮರಾಠಿ ಪತ್ರಿಕೆ ಕೇಸರಿಯ ಟ್ರಸ್ಟಿ ಸಂಪಾದಕ ದೀಪಕ್ ತಿಲಕ್ ಅವರು ಬುಧವಾರ ಮುಂಜಾನೆ ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಅವರು ವಯೋಸಹಜ ಕಾಯಿಲೆಗಳಿಂದ ನಿಧನರಾದರು ಎಂದು ಅವರು ತಿಳಿಸಿದ್ದಾರೆ.
ತಿಲಕರು ಒಬ್ಬ ಮಗ, ಮಗಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಬುಧವಾರ ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಅವರ ಪಾರ್ಥಿವ ಶರೀರವನ್ನು ಐತಿಹಾಸಿಕ ತಿಲಕ್ವಾಡದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದೆ. ಮಧ್ಯಾಹ್ನ ವೈಕುಂಠ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
1881ರಲ್ಲಿ ಲೋಕಮಾನ್ಯ ಬಾಲಗಂಗಾಧರನಾಥ ತಿಲಕರು ಪ್ರಾರಂಭಿಸಿದ ಕೇಸರಿ ಪತ್ರಿಕೆಯ ಟ್ರಸ್ಟಿ ಸಂಪಾದಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ, ಅವರು ಇಲ್ಲಿನ ತಿಲಕ್ ಮಹಾರಾಷ್ಟ್ರ ವಿದ್ಯಾಪೀಠದಲ್ಲಿ ಉಪಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದರು.
ರಾಷ್ಟ್ರೀಯವಾದಿ ಚಿಂತಕ ಮತ್ತು ಸಮಾಜ ಸುಧಾರಕ ಲೋಕಮಾನ್ಯ ತಿಲಕ್ ಅವರ ಪರಂಪರೆಯನ್ನು ಎತ್ತಿಹಿಡಿದಿದ್ದಕ್ಕಾಗಿ ವರ ಮರಿ ಮೊಮ್ಮಗ ಶೈಕ್ಷಣಿಕ ಮತ್ತು ಪತ್ರಿಕೋದ್ಯಮ ವಲಯಗಳಲ್ಲಿ ಗೌರವಿಸಲ್ಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.