ADVERTISEMENT

ಲಾಕ್‌ಡೌನ್‌: ದೆಹಲಿ–ಘಾಜಿಯಾಬಾದ್‌ ಗಡಿಯಲ್ಲಿ ವಾಹನಗಳ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 8:42 IST
Last Updated 21 ಏಪ್ರಿಲ್ 2020, 8:42 IST
   

ಘಾಜಿಯಾಬಾದ್‌: ದೆಹಲಿ ಮತ್ತು ಘಾಜಿಯಾಬಾದ್‌ ನಡುವಿನ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧ ಮಾಡಲಾಗಿದ್ದರೂ ಸರತಿ ಸಾಲಿನಲ್ಲಿ ಸಾಕಷ್ಟು ವಾಹನಗಳು ನಿಂತಿರುವುದು ಚರ್ಚೆಗೆ ಕಾರಣವಾಗಿದೆ.

ದೆಹಲಿ–ಘಾಜಿಯಾಬಾದ್‌ ರಸ್ತೆಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ವಿಶೇಷ ಪಾಸ್‌ ಪಡೆದವರು ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವವರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆದಾಗ್ಯೂ ಪೊಲೀಸರು ನಿರ್ಮಾಣ ಮಾಡಿರುವ ಚೆಕ್‌ಪೋಸ್ಟ್‌ ಬಳಿ ನೂರಾರು ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದು ಪೊಲೀಸರು ತಪಾಸಣೆ ಮಾಡಿ ವಾಹನಗಳನ್ನು ಬಿಡುತ್ತಿದ್ದಾರೆ.

ADVERTISEMENT

ಇಷ್ಟು ಪ್ರಮಾಣದ ವಾಹನಗಳಿಗೆ ಅವಕಾಶ ನೀಡಿದ್ದು ಹೇಗೆ ಎಂದು ಸಾರ್ಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು ನಕಲಿ ಪಾಸ್‌ಗಳ ಹಾವಳಿ ಇರಬಹುದು ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.