ನವದೆಹಲಿ: ಕೇಂದ್ರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶುಕ್ರವಾರ ನಗರದಲ್ಲಿ ಶಿರೋಮಣಿ ಅಕಾಲಿ ದಳದವರು (ಎಸ್‌ಎಡಿ) ನಡೆಸಿದ ಪ್ರತಿಭಟನೆಯಿಂದಾಗಿ ಟುಟಿಯನ್ಸ್ ಮತ್ತು ಐಟಿಒ ಸೇರಿದಂತೆ ರಾಷ್ಟ್ರ ರಾಜಧಾನಿ ದೆಹಲಿಯ ಕೆಲವು ಭಾಗಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು.
ದೆಹಲಿ ಸಂಚಾರಿ ಪೊಲೀಸರು ಸಂಚಾರ ತೊಂದರೆ ಇರುವ ಪ್ರದೇಶಗಳ ಬಗ್ಗೆ ಪ್ರಯಾಣಿಕರಿಗೆ ಸೂಚನೆಗಳನ್ನಿ ನೀಡಿ, ಪರ್ಯಾಯ ಮಾರ್ಗ ಬಳಕಗೆ ಮನವಿ ಮಾಡಿದ್ದಾರೆ
ದಹಲಿಯ ಹೃದಯ ಭಾಗ, ಧೌಲಾ ಕುವಾನ್, ಐಟಿಒ, ವಿಕಾಸ್ ಮಾರ್ಗ, ದೆಹಲಿ ಗೇಟ್, ಕರೋಲ್ ಬಾಗ್ ಪ್ರದೇಶಗಳಿಂದ ಹೆಚ್ಚು ಕರೆಗಳು ಬಂದಿವೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.