ADVERTISEMENT

ತೆರೆದ ಪುರಿ ಜಗನ್ನಾಥ ದೇವಾಲಯ; ಜ.3 ರಿಂದ ಸಾರ್ವಜನಿಕರಿಗೆ ಅವಕಾಶ

ಒಂಬತ್ತು ತಿಂಗಳ ನಂತರ ಮೊದಲ ಬಾರಿಗೆ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ

ಪಿಟಿಐ
Published 23 ಡಿಸೆಂಬರ್ 2020, 11:23 IST
Last Updated 23 ಡಿಸೆಂಬರ್ 2020, 11:23 IST
ಪುರಿ ಜಗನ್ನಾಥ ದೇವಾಲಯ
ಪುರಿ ಜಗನ್ನಾಥ ದೇವಾಲಯ   

ಪುರಿ: ʻಕೋವಿಡ್‌ 19ʼ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ಒಂಬತ್ತು ತಿಂಗಳಿನಿಂದ ಬಂದ್‌ ಮಾಡಲಾಗಿದ್ದ ಇಲ್ಲಿನ ಪ್ರಸಿದ್ಧ ಜಗನ್ನಾಥ ದೇವಾಲಯವನ್ನುಬುಧವಾರದಿಂದ ತೆರೆಯಲಾಗಿದೆ.

ದೇವಾಲಯ ತೆರೆಯುತ್ತಿದ್ದಂತೆ, ದೇವಾಲಯದ ಸೇವಕರು ಮತ್ತು ಕುಟುಂಬದ ಸದಸ್ಯರು ಕೋವಿಡ್‌ 19 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ,ಮುಂಜಾನೆ7 ಗಂಟೆಗೆ ಭಗವಾನ್‌ ಬಲಭದ್ರ, ದೇವಿ ಸುಭದ್ರಾ ಮತ್ತು ಭಗವಾನ್‌ ಜಗನ್ನಾಥ ದೇವರ ದರ್ಶನ ಪಡೆದರು.

ಆರಂಭದಲ್ಲಿ ಮೊದಲ ಮೂರು ದಿನ (ಡಿ. 23, 24 ಮತ್ತು 25), ಕಟ್ಟುನಿಟ್ಟಿನ ಕೋವಿಡ್‌ -19ನಿಯಮಗಳೊಂದಿಗೆ ದೇವಾಲಯದ ಸೇವಕರು ಮತ್ತು ಅವರ ಕುಟುಂಬದ ಸದಸ್ಯರಿಗೆದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಪುರಿಜಿಲ್ಲಾಧಿಕಾರಿ ಬಲ್ವಂತ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ನಂತರಡಿ. 26 ರಿಂದ ಡಿ.31 ರಸಂಜೆವರೆಗೆ ಪುರಿಯ ನಿವಾಸಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಹೊಸ ವರ್ಷದಆರಂಭದ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಕಾರಣ, ಜನವರಿ 1 ಮತ್ತು 2 ರಂದು ಮತ್ತೆ ದೇವಾಲಯ ಮುಚ್ಚಲಾಗುವುದು. ಜನವರಿ 3 ರಿಂದ ಎಲ್ಲಾ ಭಕ್ತರಿಗಾಗಿ ದೇವಾಲಯಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗ ಆರಂಭವಾಗುತ್ತಿದ್ದಂತೆ ಮಾರ್ಚ್‌ ತಿಂಗಳ ಮಧ್ಯಭಾಗದಿಂದ ದೇವಾಲಯವನ್ನು ಮುಚ್ಚಲಾಗಿತ್ತು. ವಿಷ್ಣು ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಗೆ ದೇವರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತುಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.