ಯೋಗಿ ಆದಿತ್ಯನಾಥ್
–ಪಿಟಿಐ ಚಿತ್ರ
ಲಖನೌ: ಅಯೋಧ್ಯೆ ಸನಾತನ ಧರ್ಮದ ಮೂಲ. ಭಾರತದಲ್ಲಿ ಸನಾತನ ಧರ್ಮಕ್ಕೆ ಸ್ಫೂರ್ತಿ ನೀಡಿದ ಭೂಮಿ ಎಂದೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಆದಿತ್ಯನಾಥ್ ಅವರು ಇಂದು (ಶುಕ್ರವಾರ) ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನ ಮತ್ತು ರಾಮ ಮಂದಿರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ಈ ಜಗತ್ತಿನಲ್ಲಿ ಯಾರ ವ್ಯಕ್ತಿತ್ವಕ್ಕೆ ಬರವಣಿಗೆಯ ರೂಪ ನೀಡಲು ಸಾಧ್ಯ ಎಂದರೆ ಅದು ಭಗವಂತ ಶ್ರೀ ರಾಮನಿಗೆ ಮಾತ್ರವೇ. ಶ್ರೀ ರಾಮನ ಬಗ್ಗೆ ಬರೆದವರು ಸಹ ಇತಿಹಾಸದಲ್ಲಿ ಶ್ರೇಷ್ಠರಾದರು. ಮಹರ್ಷಿ ನಾರದರು ಹೀಗೆಂದೇ ಮಹರ್ಷಿ ವಾಲ್ಮೀಕಿ ಅವರಿಗೆ ತಿಳಿಸಿದ್ದರು ಎಂದೂ ಆದಿತ್ಯನಾಥ್ ಹೇಳಿದ್ದಾರೆ.
ಭಾರತದ ಸನಾತನ ಧರ್ಮದ ಮೂಲ ಅಯೋಧ್ಯೆ. 'ಇದು' ಸಪ್ತ ಪುರಿಗಳಲ್ಲಿ ಮೊದಲ 'ಪುರಿ' (ಪವಿತ್ರ ಯಾತ್ರಾ ಸ್ಥಳ). ಸನಾತನ ಧರ್ಮಕ್ಕೆ ಸ್ಫೂರ್ತಿ ನೀಡಿದ ಭೂಮಿಯಾಗಿದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
ಅಯೋಧ್ಯಾ ಉಸ್ತುವಾರಿ ಸಚಿವ ಸೂರ್ಯ ಪ್ರತಾಪ್ ಶಾಹಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಯಕಿ ಮಾಲಿನಿ ಅವಸ್ಥಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.