ADVERTISEMENT

ಕೇರಳದಲ್ಲಿ ಕ್ರೈಸ್ತರೂ 'ಲವ್', 'ಮಾದಕವಸ್ತು ಜಿಹಾದ್' ಬಲೆಗೆ: ಕ್ಯಾಥೋಲಿಕ್ ಬಿಷಪ್

ಪಿಟಿಐ
Published 9 ಸೆಪ್ಟೆಂಬರ್ 2021, 11:23 IST
Last Updated 9 ಸೆಪ್ಟೆಂಬರ್ 2021, 11:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಟ್ಟಾಯಂ: ಕೇರಳದಲ್ಲಿ ಕ್ರೈಸ್ತ ಮಹಿಳೆಯರನ್ನು 'ಲವ್' ಮತ್ತು 'ಮಾದಕವಸ್ತು ಜಿಹಾದ್‌'ಗೆ ಬಳಕೆ ಮಾಡಲಾಗುತ್ತಿದೆ ಎಂದು ಕ್ಯಾಥೋಲಿಕ್ ಬಿಷಪ್ ಆರೋಪಿಸಿದ್ದಾರೆ.

ಎಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲವೋ ಅಲ್ಲಿ ಉಗ್ರರು ಯುವ ಜನಾಂಗವನ್ನು ನಾಶ ಮಾಡಲು ಇಂತಹ ವಿಧಾನಗಳನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.

ಕೇರಳದಲ್ಲಿ ಲವ್ ಜಿಹಾದ್‌ನ ಭಾಗವಾಗಿ ಮುಸ್ಲಿಂ ಧರ್ಮದ ಹೊರತಾದ ವಿಶೇಷವಾಗಿಯೂ ಕ್ರೈಸ್ತ ಮಹಿಳೆಯರನ್ನು ಪ್ರೀತಿಯಲ್ಲಿ ಸಿಲುಕಿಸಿ ಮತಾಂತರಗೊಳಿಸಿ ಶೋಷಣೆ ಮಾಡಿ ನಂತರ ಭಯೋತ್ಪಾದನೆಯಂತಹ ವಿನಾಶಕಾರಿ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಸಿರೊ-ಮಲಬಾರ್ ಚರ್ಚ್‌ಗೆ ಸೇರಿದ ಪಾಲಾ ಬಿಷಪ್ ಮಾರ್ ಜೋಸೆಫ್ ಕಲ್ಲರಂಘಾಟ್ ಆರೋಪಿಸಿದ್ದಾರೆ.

ಕುರುವಿಳಂಘಾಟ್ ಜಿಲ್ಲೆಯ ಚರ್ಚ್‌ನಲ್ಲಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೇರಳದ ಕ್ಯಾಥೋಲಿಕ್ ಬಿಷಪ್ ನೀಡಿರುವ ಹೇಳಿಕೆಯು ವಿವಾದವನ್ನು ಹುಟ್ಟು ಹಾಕಿದೆ.

'ವಿಶ್ವದಾದ್ಯಂತ ಕೋಮುವಾದ, ಧಾರ್ಮಿಕ ಅಸಮಾನತೆ, ಅಸಹಿಷ್ಣುತೆ ಮತ್ತು ತಿರಸ್ಕಾರಭಾವವನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಜಿಹಾದಿಗಳ ಉಪಸ್ಥಿತಿಯ ವಿರುದ್ಧ ಎಚ್ಚರಿಸಿರುವ ಬಿಷಪ್, ಕೇರಳದಲ್ಲಿ ಇತರೆ ಧರ್ಮೀಯರನ್ನು ನಾಶಮಾಡಲು ವಿಭಿನ್ನ ವಿಧಾನಗಳನ್ನು ಬಳಸಲಾಗುತ್ತಿದೆ. 'ಲವ್ ಜಿಹಾದ್' ಹಾಗೂ 'ಮಾದಕವಸ್ತು ಜಿಹಾದ್' ಅಂತಹ ಎರಡು ವಿಧಾನವಾಗಿದೆ. ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಇತರೆ ಧರ್ಮಗಳಿಗೆ ಸೇರಿದ ಜನರನ್ನು ಶಸ್ತ್ರಾಸ್ತ್ರಗಳನ್ನು ಬಳಸಿ ನಾಶ ಮಾಡುವುದು ಸುಲಭವಲ್ಲ ಎಂಬುದು ಜಿಹಾದಿಗಳಿಗೆ ತಿಳಿದಿದೆ. ಹಾಗಾಗಿ ಗುರಿ ಸಾಧಿಸಲು ಇಂತಹ ಹಾದಿಯನ್ನು ಬಳಸಲಾಗುತ್ತಿದೆ' ಎಂದು ಹೇಳಿದ್ದಾರೆ.

ಕೇರಳದ ಮಾಜಿ ಡಿಜಿಪಿ ಲೋಕನಾಥ್ ಬೆಹೆರಾ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು ಕೇರಳವು ಭಯೋತ್ಪಾದಕರ ನೇಮಕಾತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.