ADVERTISEMENT

ಉತ್ತರ ಸಿಕ್ಕಿಂ: ಹಿಮಪಾತದಲ್ಲಿ ಪ್ರಾಣ ಕಳೆದುಕೊಂಡ ಲೆಫ್ಟಿನೆಂಟ್ ಕರ್ನಲ್, ಸೈನಿಕ

ಏಜೆನ್ಸೀಸ್
Published 15 ಮೇ 2020, 3:15 IST
Last Updated 15 ಮೇ 2020, 3:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉತ್ತರ ಸಿಕ್ಕಿಂನ ಲುಗ್‌ನಕ್‌ ಲಾ ಪರ್ವತ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಹಿಮಪಾತದಲ್ಲಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮತ್ತು ಯೋಧರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಸಿಬ್ಬಂದಿ 18 ಸದಸ್ಯರ ಗುಂಪಿನ ಭಾಗವಾಗಿದ್ದರು. ಆ ಗುಂಪನ್ನು ಹಿಮಪಾತ ಸಂಭವಿಸುವ ಸ್ಥಳದಲ್ಲಿ ನಿಯೋಜಿಸಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

'ಮೇ 14ರಂದು ಉತ್ತರ ಸಿಕ್ಕಿಂನಲ್ಲಿ ಪೆಟ್ರೋಲಿಂಗ್-ಕಮ್-ಸ್ನೋ ಕ್ಲಿಯರೆನ್ಸ್ ಕೆಲಸಕ್ಕೆ ನಿಯೋಜಿಸಲಾಗಿದ್ದ ಗುಂಪು ಹಿಮಪಾತಕ್ಕೆ ಸಿಲುಕಿತ್ತು' ಎಂದು ಸೇನೆಯ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಮ್ಮ ಎಲ್ಲ ಪ್ರಯತ್ನಗಳ ಹೊರತಾಗಿಯೂ ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿ.ಎ ಮತ್ತು ಸೈನಿಕ ಸಪಾಲಾ ಷಣ್ಮಖ ರಾವ್ ಪ್ರಾಣ ಕಳೆದುಕೊಂಡರು ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.