ADVERTISEMENT

ಕೋವಿಡ್‌-19: ಎಲ್‌ ಆ್ಯಂಡ್‌ಟಿ ಕಂಪನಿಯಿಂದ 22 ಆಮ್ಲಜನಕ ಜನರೇಟರ್‌

​ಪ್ರಜಾವಾಣಿ ವಾರ್ತೆ
Published 5 ಮೇ 2021, 7:01 IST
Last Updated 5 ಮೇ 2021, 7:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಭಾರತದಲ್ಲಿನ ವಿವಿಧ ಆಸ್ಪತ್ರೆಗಳಿಗೆ 22 ಆಮ್ಲಜನಕ ಜನರೇಟರ್‌ಗಳನ್ನು ಪೂರೈಸುವುದಾಗಿ ‘ಎಲ್‌ ಆ್ಯಂಡ್‌ ಟಿ’ ಕಂಪನಿ ಪ್ರಕಟಿಸಿದೆ.

’ಆಮ್ಲಜನಕ ಕೊರತೆಯನ್ನು ನೀಗಿಸಲು ಈ ಕ್ರಮಕೈಗೊಳ್ಳಲಾಗಿದೆ. ಅತಿಹೆಚ್ಚು ಅಭಾವ ಇರುವ ಸ್ಥಳಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಈ ಜನರೇಟರ್‌ಗಳು ವಾತಾವರಣದಲ್ಲಿ ವಾಯುವನ್ನು ಸೆಳೆದುಕೊಂಡು ವೈದ್ಯಕೀಯ ಗ್ರೇಡ್‌ ಆಮ್ಲಜನಕವನ್ನಾಗಿ ಪರಿವರ್ತಿಸುತ್ತದೆ. ಬಳಿಕ, ಪೈಪ್‌ಗಳ ಮೂಲಕ ಪೂರೈಸುವ ವ್ಯವಸ್ಥೆ ಹೊಂದಿವೆ’ ಎಂದು ಕಂಪನಿ ತಿಳಿಸಿದೆ.

ಮೊದಲ ಹಂತದಲ್ಲಿ ಮೇ 9ರಂದು ಒಂಬತ್ತು ಉಪಕರಣಗಳು ಭಾರತಕ್ಕೆ ತಲುಪಲಿವೆ. ಇವುಗಳನ್ನು ಆಸ್ಪತ್ರೆಗೆ ಮೇ 15ರಿಂದ ವಿತರಿಸಲಾಗುವುದು ಎಂದು ತಿಳಿಸಿದೆ.

ADVERTISEMENT

‘ಪ್ರಸ್ತುತ ಸಂಕಷ್ಟ ತಲೆದೋರಿದೆ. ಆಮ್ಲಜನಕ ಕೊರತೆಯಿಂದ ಹಲವು ರೀತಿಯ ಗಂಭೀರ ಪರಿಣಾಮಗಳಾಗುತ್ತಿವೆ. ಭಾರತ ಮತ್ತು ವಿದೇಶದಲ್ಲಿನ ನಮ್ಮ ತಂಡಗಳು ಆಮ್ಲಜನಕ ಜನರೇಟರ್‌ ಸಂಗ್ರಹ ಕಾರ್ಯದಲ್ಲಿ ತೊಡಗಿವೆ’ ಎಂದು ‘ಎಲ್‌ ಆ್ಯಂಡ್‌ ಟಿ’ ಸಿಇಒ ಎಸ್‌.ಎನ್‌. ಸುಬ್ರಹ್ಮಮಣ್ಯನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.