ಚೆನ್ನೈ: ಪಶ್ಚಿಮ ಬಂಗಾಳದ ರಾಜ್ಯಪಾಲ ಲ. ಗಣೇಶನ್ ಅವರ ಸಹೋದರನ 80ನೇ ಜನ್ಮದಿನದ ಅಂಗವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್ ಅವರು ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಈ ವೇಳೆ ಸ್ಟಾರ್ ನಟ ರಜನಿಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗಣೇಶನ್ ಅವರು ಮಣಿಪುರದ ರಾಜ್ಯಪಾಲರು, ಪಶ್ಚಿಮ ಬಂಗಾಳಕ್ಕೂ ಹೆಚ್ಚುವರಿಯಾಗಿ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚೆನ್ನೈನಲ್ಲಿ ಗುರುವಾರ ಗಣೇಶನ್ ಅವರ ಸಹೋದರನ 80ನೇ ಜನ್ಮದಿನ ನಡೆಯಿತು. ಬ್ಯಾನರ್ಜಿ ಅವರು ಬುಧವಾರ ಕೋಲ್ಕತದಿಂದ ಚೆನ್ನೈಗೆ ಆಗಮಿಸಿದ್ದರು. ಬಳಿಕ ಸ್ಟಾಲಿನ್ ಅವರ ನಿವಾಸಕ್ಕೆ ಮಮತಾ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.