ADVERTISEMENT

ವಿಡಿಯೊ | ಮಧ್ಯಪ್ರದೇಶ: ಹಿರಿಯ ನಾಗರಿಕರೊಬ್ಬರ ಮೇಲೆ ಒದ್ದು ಹಲ್ಲೆ ನಡೆಸಿದ ಪೊಲೀಸ್

ಐಎಎನ್ಎಸ್
Published 29 ಜುಲೈ 2022, 15:56 IST
Last Updated 29 ಜುಲೈ 2022, 15:56 IST
ಚಿತ್ರ ಕೃಪೆ – ಟ್ವಿಟರ್‌ನಲ್ಲಿ ಶೇರ್ ಆಗಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್
ಚಿತ್ರ ಕೃಪೆ – ಟ್ವಿಟರ್‌ನಲ್ಲಿ ಶೇರ್ ಆಗಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್   

ಭೋಪಾಲ್: ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಹಿರಿಯ ನಾಗರಿಕರೊಬ್ಬರ ಮೇಲೆ ಬೂಟುಗಾಲಿನಿಂದ ಒದ್ದು, ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ರೈಲು ನಿಲ್ದಾಣದಲ್ಲಿ ನಡೆದಿದೆ. ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಲಾಗಿದೆ.

ಕಾನ್‌ಸ್ಟೆಬಲ್ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಜಬಲ್‌ಪುರ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಅನೇಕ ಜನ ಮೂಕಪ್ರೇಕ್ಷಕರಂತೆ ಹಲ್ಲೆಯನ್ನು ನೋಡಿ ಅಸಹಾಯಕರಾಗಿ ನಿಂತಿರುವುದೂ ವಿಡಿಯೊದಲ್ಲಿ ಕಾಣಿಸಿದೆ.

ರೈಲು ಪ್ರಯಾಣಿಕರೊಬ್ಬರು ಹಲ್ಲೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ.

ಕಾನ್‌ಸ್ಟೆಬಲ್ ಹಲ್ಲೆ ನಡೆಸಲು ಕಾರಣವೇನೆಂಬುದು ಇನ್ನಷ್ಟೇ ತಿಳಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.