ADVERTISEMENT

ಮಧ್ಯಪ್ರದೇಶ: ದೇವಾಲಯ ಪ್ರವೇಶಿಸದಂತೆ ದಲಿತ ವರನಿಗೆ ತಡೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 5:36 IST
Last Updated 22 ನವೆಂಬರ್ 2019, 5:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬುರಹಾನ್‌ಪುರ್‌: ಮಧ್ಯಪ್ರದೇಶದಬುರಹಾನ್‌ಪುರ್‌ನ ಬಿರೋದಾ ಗ್ರಾಮದಲ್ಲಿದಲಿತ ವರನೊಬ್ಬ ದೇವಾಲಯಕ್ಕೆ ಬಂದಾಗ ಒಳಗೆ ಪ್ರವೇಶಿಸದಂತೆ ಆತನಿಗೆ ಜನರು ತಡೆಯೊಡ್ಡಿದ್ದಾರೆಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗೀಯ ಮೆಜಿಸ್ಟ್ರೇಟ್ ಕಾಶೀರಾಂ ಬಡೋಲೆ ಹೇಳಿದ್ದಾರೆ.

ದಲಿತ ಕುಟುಂಬ ದೇವಾಲಯಕ್ಕೆ ಪ್ರವೇಶಿಸುವಾಗ ಕೆಲವು ಜನರು ಅವರನ್ನು ತಡೆದಿದ್ದಾರೆ. ಈ ಬಗ್ಗೆ ಕುಟುಂಬ ಜಿಲ್ಲಾಧಿಕಾರಿಗೆ ದೂರು ನೀಡಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ಬಡೋಲೆ ಮಾಧ್ಯಮದವರಲ್ಲಿ ಹೇಳಿದ್ದಾರೆ.

ADVERTISEMENT

ದೇವಾಲಯದಲ್ಲಿ ಮದುವೆಯಾಗುವುದಕ್ಕಾಗಿ ಜಿಲ್ಲಾಧಿಕಾರಿಯಿಂದ ಮುಂಗಡ ಅನುಮತಿ ಪಡೆದಿದ್ದೆವು. ಆದರೆ ನಾವು ಅಲ್ಲಿಗೆ ಹೋದಾಗ ಕೆಲವರು ದೇವಾಲಯದ ಗೇಟಿಗೆ ಬೀಗ ಹಾಕಿದ್ದರು. ದಲಿತರಾಗಿರುವ ಕಾರಣ ನಮ್ಮನ್ನು ಕೆಲವರು ದೇವಾಲಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ.ಜಿಲ್ಲಾಧಿಕಾರಿಗಳ ಅನುಮತಿ ಪಡೆದು ದೇವಾಲಯದಲ್ಲಿ ಮದುವೆ ಮಂಟಪ ಸಿದ್ಧಪಡಿಸಿದ್ದರೂ ಈ ರೀತಿ ಆಗಿದೆ ಎಂದು ವರ ಸಂದೀಪ್ ಗವಾಲೆ ಹೇಳಿದ್ದಾರೆ.

ದೇವಾಲಯದ ಟ್ರಸ್ಟಿಗಳ ಆದೇಶದ ಮೇರೆಗೆ ಗೆೇಟ್‌ಗೆ ಬೀಗ ಹಾಕಲಾಗಿದೆ ಎಂದು ಸಂದೀಪ್ ಆರೋಪಿಸಿದ್ದಾರೆ. ಈ ದಲಿತ ಕುಟುಂಬಕ್ಕೆ ಭದ್ರತೆ ಒದಗಿಸುವುದಾಗಿ ಲಾಲ್ ಬಾಗ್ ಠಾಣೆಯ ಎಸ್‌ಎಚ್‌ಒಬಿಕ್ರಮ್ ಸಿಂಗ್ ಬೊಮಾನಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.