ಭೋಪಾಲ್( ಮಧ್ಯ ಪ್ರದೇಶ): ತಿಂಗಳಿಗೆ ₹ 6000 ಸಂಪಾದಿಸುವ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ₹ 3 ಕೋಟಿ ತೆರಿಗೆ ಪಾವತಿಸುವಂತೆ ಆದಾಯತೆರಿಗೆ ಇಲಾಖೆನೋಟಿಸ್ ಜಾರಿ ಮಾಡಿದೆ.
ರವಿ ಗುಪ್ತ ಎನ್ನುವವರಿಗೆ ಆದಾಯ ತೆರಿಗೆ ಇಲಾಖೆಯಿಂದ ₹ 3.49 ಕೋಟಿ ತೆರಿಗೆ ಪಾವತಿಸುವಂತೆನೋಟಿಸ್ ನೀಡಲಾಗಿದೆ. ತಾನು ತಿಂಗಳಿಗೆ ₹ 6000ದುಡಿಯುದಾಗಿಅವರು ಎಎನ್‌ಐ ಸುದ್ದಿ ಸಂಸ್ಥೆಗೆತಿಳಿಸಿದ್ದಾರೆ.
2011ರಲ್ಲಿಪಾನ್ಕಾರ್ಡ್ ಮತ್ತುಫೋಟೋಬಳಸಿ ₹132 ಕೋಟಿ ಮೊತ್ತದ ವ್ಯವಹಾರ ನಡೆದಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ. ತಾನು ಯಾವುದೇ ಖಾತೆ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.