ADVERTISEMENT

ಫೆಬ್ರುವರಿ 18ರಂದು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬರಲಿವೆ 12 ಚೀತಾ

ಪಿಟಿಐ
Published 14 ಫೆಬ್ರುವರಿ 2023, 5:51 IST
Last Updated 14 ಫೆಬ್ರುವರಿ 2023, 5:51 IST
   

ಶಿಯೊಪುರ್(ಮಧ್ಯಪ್ರದೇಶ): ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಎರಡನೇ ಬ್ಯಾಚ್‌ನ 12 ಚೀತಾಗಳು ಫೆಬ್ರುವರಿ 18ರಂದು ಆಗಮಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

6 ತಿಂಗಳ ಹಿಂದೆ ಇದೇ ರಕ್ಷಿತಾರಣ್ಯಕ್ಕೆ 8 ಚೀತಾಗಳನ್ನು ಬಿಡಲಾಗಿತ್ತು.

ಸದ್ಯದ ಯೋಜನೆಗಳ ಪ್ರಕಾರ, ಫೆಬ್ರುವರಿ 18ರಂದು ಇನ್ನೂ 12 ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗುತ್ತಿದೆ ಎಂದು ಉದ್ಯಾನದ ಪ್ರಧಾನ ಸಂರಕ್ಷಕ ಅಧಿಕಾರಿ ಜೆ.ಎಸ್. ಚೌಹಾಣ್ ಹೇಳಿದ್ದಾರೆ.

ADVERTISEMENT

ಮೊದಲು ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ಗ್ವಾಲಿಯರ್‌ಗೆ ತರಲಾಗುತ್ತದೆ, ಬಳಿಕ, ಅವುಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಅವರು ಹೇಳಿದರು.

ನಿಯಮಗಳ ಪ್ರಕಾರ, ಚೀತಾಗಳನ್ನು ಒಂದು ತಿಂಗಳು ಕ್ವಾರಂಟೈನ್‌ನಲ್ಲಿ ಇಡಲಾಗುವುದು ಎಂದೂ ಅಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್ 17ರಂದು ತಮ್ಮ ಹುಟ್ಟುಹಬ್ಬದ ದಿನ ಪ್ರಧಾನಿ ನರೇಂದ್ರ ಮೋದಿ, ನಮೀಬಿಯಾದಿಂದ ತರಲಾಗಿದ್ದ ಮೊದಲ ಬ್ಯಾಚ್‌ನ 8 ಚೀತಾಗಳನ್ನು(5 ಹೆಣ್ಣು, 3 ಗಂಡು) ಕುನೊ ರಾಷ್ಟ್ರೀಯ ಉದ್ಯಾನದ ಕ್ವಾರಂಟೈನ್ ವಲಯಕ್ಕೆ ಬಿಡುಗಡೆ ಮಾಡಿದ್ದರು.

ಭಾರತದಲ್ಲಿ ಚೀತಾಗಳ ಸಂತತಿ ನಶಿಸಿದ 7 ದಶಕಗಳ ಬಳಿಕ ಮತ್ತೆ ದೇಶಕ್ಕೆ ಚೀತಾಗಳನ್ನು ತರಲಾಗುತ್ತಿದೆ. 1947ರಲ್ಲಿ ಛತ್ತಿಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ಕೊನೆಯ ಚೀತಾ ಮೃತಪಟ್ಟಿತ್ತು. 1952ರಲ್ಲಿ ದೇಶದಲ್ಲಿ ಚೀತಾ ಸಂತತಿ ನಶಿಸಿದೆ ಎಂದು ಘೊಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.