ADVERTISEMENT

‘ಸಕ್ಷಮ ಪ್ರಾಧಿಕಾರ ಹೇಳದ ಹೊರತು ರಾಷ್ಟ್ರೀಯತೆ ಅನ್ವಯವಿಲ್ಲ’

ಪಿಟಿಐ
Published 21 ಜುಲೈ 2018, 17:58 IST
Last Updated 21 ಜುಲೈ 2018, 17:58 IST

ಚೆನ್ನೈ :ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಮತ್ತು ವಿವಾಹ ನೋಂದಣಿ ಪತ್ರದಂತಹ ದಾಖಲೆಗಳನ್ನು ಹೊಂದಿದ್ದರೂ, ಸಕ್ಷಮ ಪ್ರಾಧಿಕಾರ (ಕಾಂಪಿಟೆಂಟ್‌ ಅಥಾರಿಟಿ) ಒಪ್ಪಿಗೆ ಸೂಚಿಸದ ಹೊರತು ರಾಷ್ಟ್ರೀಯತೆ ಅನ್ವಯವಾಗುವುದಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

ಈ ನಿಟ್ಟಿನಲ್ಲಿ ಶ್ರೀಲಂಕಾ ಮೂಲದ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಟಿ. ರಾಜಾ ವಜಾ ಗೊಳಿಸಿದ್ದಾರೆ.

ಕಳೆದ ವಾರ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತನ್ನನ್ನು ಬಿಡುಗಡೆಗೊಳಿಸುವಂತೆ ಮತ್ತು ತನ್ನ ತಾಯಿಯನ್ನು ಭಾರತೀಯ ಪ್ರಜೆ ಎಂದು ಪರಿಗಣಿಸಲು ಕೋರಿ ಮಹಿಳೆ ಹೈಕೋರ್ಟ್‌
ಮೆಟ್ಟಿಲೇರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.