ADVERTISEMENT

ಮಾಘಮೇಳ: 3 ಕೋಟಿಗೂ ಅಧಿಕ ಭಕ್ತರಿಂದ ಪುಣ್ಯಸ್ನಾನ

ಪಿಟಿಐ
Published 18 ಜನವರಿ 2026, 14:12 IST
Last Updated 18 ಜನವರಿ 2026, 14:12 IST
ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಭಕ್ತರು ಭಾನುವಾರ ಪವಿತ್ರ ಸ್ನಾನ ಮಾಡಿದರು – ಪಿಟಿಐ ಚಿತ್ರ
ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಭಕ್ತರು ಭಾನುವಾರ ಪವಿತ್ರ ಸ್ನಾನ ಮಾಡಿದರು – ಪಿಟಿಐ ಚಿತ್ರ   

ಪ್ರಯಾಗರಾಜ್: ಮಾಘಮೇಳದ ಅಂಗವಾಗಿ ಮೌನಿ ಅಮಾವಾಸ್ಯೆ ದಿನವಾದ ಭಾನುವಾರ ತ್ರಿವೇಣಿ ಸಂಗಮದಲ್ಲಿ 3.15 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದರು.

ಮಧ್ಯರಾತ್ರಿಯಿಂದಲೇ ಭಕ್ತರ ದಂಡು ಗಂಗಾ ಮತ್ತು ಸಂಗಮ ಘಾಟ್‌ ಕಡೆಗೆ ಹರಿದುಬಂದಿತ್ತು. ದಟ್ಟಮಂಜಿನ ನಡುವೆಯೂ ಭಕ್ತರು ತೀರ್ಥಸ್ನಾನ ಮಾಡಿದರು.

‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಸೂಚನೆಯಂತೆ ಹೆಲಿಕಾಪ್ಟರ್‌ ಮೂಲಕ ಭಕ್ತರ ಮೇಲೆ ಪುಷ್ಷವೃಷ್ಠಿ ಮಾಡಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು. 

ADVERTISEMENT

‘800 ಹೆಕ್ಟೆ‌ರ್‌ ಪ್ರದೇಶದಲ್ಲಿ ಮಾಘ ಮೇಳ ನಡೆಯುತ್ತಿದೆ. 10 ಸಾವಿರಕ್ಕೂ ಅಧಿಕ ಪೊಲೀಸರ‌ನ್ನು ನಿಯೋಜಿಸಲಾಗಿದೆ. 25 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, 3500 ಕ್ಕೂ ಅಧಿಕ ಸ್ವಚ್ಛತಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.