ADVERTISEMENT

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: 7 ಮಂದಿಯ ಬಂಧನ

ಪಿಟಿಐ
Published 11 ಜನವರಿ 2021, 6:36 IST
Last Updated 11 ಜನವರಿ 2021, 6:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನಾಸಿಕ್‌: ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ಈ ಘಟನೆನಾಸಿಕ್‌ ರಸ್ತೆ ಬಳಿ ಶನಿವಾರ ನಡೆದಿದೆ. ಬಾಲಕಿಯ ಪೋಷಕರು ಕೆಲಸದಿಂದ ಮನೆಗೆ ವಾಪಾಸು ಬಂದಾಗ ಮಗಳು ಮನೆಯಲ್ಲಿ ಇರಲಿಲ್ಲ. ಬಳಿಕ ಆಕೆಗೆ ಹುಡುಕಾಟ ನಡೆಸುತ್ತಿರುವಾಗ ಸಮೀಪದ ಕಟ್ಟಡವೊಂದರ ಟೆರೇಸ್‌ ಮೇಲೆ ಆಕೆ ಅಳುತ್ತಾ ಕೂತಿದ್ದಳು. ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

‘ ಪ್ರಕರಣ ಸಂಬಂಧ ಬಾಲಕ ಸೇರಿ 19 ರಿಂದ 29 ವರ್ಷದ ಐವರು ಯುವಕರು ಮತ್ತು ಅವರಿಗೆ ಸಹಾಯ ಮಾಡಿದ ಮಹಿಳೆಯೊಬ್ಬಳನ್ನು ಭಾನುವಾರ ಬಂಧಿಸಲಾಗಿದೆ. ’ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.