ADVERTISEMENT

ಗೋದಾಮು ಕುಸಿದು ಇಬ್ಬರು ಸಾವು: ಹಲವರು ಸಿಲುಕಿರುವ ಶಂಕೆ

ಪಿಟಿಐ
Published 29 ಏಪ್ರಿಲ್ 2023, 14:54 IST
Last Updated 29 ಏಪ್ರಿಲ್ 2023, 14:54 IST
ಭಿವಂಡೀ ನಗರದಲ್ಲಿ ಶನಿವಾರ ಎರಡು ಅಂತಸ್ತಿನ ಗೋದಾಮು ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವ ಸಿಬ್ಬಂದಿ –ಪಿಟಿಐ ಚಿತ್ರ
ಭಿವಂಡೀ ನಗರದಲ್ಲಿ ಶನಿವಾರ ಎರಡು ಅಂತಸ್ತಿನ ಗೋದಾಮು ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವ ಸಿಬ್ಬಂದಿ –ಪಿಟಿಐ ಚಿತ್ರ   

ಠಾಣೆ: ಎರಡು ಅಂತಸ್ತಿನ ಗೋದಾಮು ಕುಸಿದು ಕನಿಷ್ಠ ಇಬ್ಬರು ಮೃತಪಟ್ಟು, ಹತ್ತು ಮಂದಿ ಗಾಯಗೊಂಡ ಘಟನೆ ಇಲ್ಲಿನ ಭಿವಂಡೀ ನಗರದಲ್ಲಿ ಶನಿವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಧ್ಯಾಹ್ನ 1.45ರ ಸುಮಾರಿಗೆ ಘಟನೆ ನಡೆದಿದ್ದು, ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಕನಿಷ್ಠ 10–15 ಮಂದಿ ಭಗ್ನಾವಶೇಷದಡಿ ಸಿಲುಕಿರುವ ಸಾಧ್ಯತೆ ಇದೆ’ ಎಂದು ಠಾಣೆ ಮಹಾನಗರ ಪಾಲಿಕೆ ಪ್ರಾದೇಶಿಕ ವಿಪತ್ತು ನಿರ್ವಹಣೆ ವಿಭಾಗದ ಮುಖ್ಯಸ್ಥ ಅವಿನಾಶ್‌ ಸಾವಂತ್‌ ತಿಳಿಸಿದ್ದಾರೆ.

ಕಟ್ಟಡದ ಕೊನೆಯ ಅಂತಸ್ತಿನಲ್ಲಿ ನಾಲ್ಕು ಮಂದಿಯನ್ನು ಒಳಗೊಂಡ ಕುಟುಂಬ ವಾಸಿಸುತ್ತಿತ್ತು. ಕೆಳ ಅಂತಸ್ತಿನಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಅವರು ತಿಳಿಸಿದರು.

ADVERTISEMENT

ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ಎರಡು ತಂಡ ಮತ್ತು ರಾಜ್ಯ ವಿಪತ್ತು ನಿರ್ವಹಣೆ ಪಡೆಯ ಒಂದು ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಗೋದಾಮು ಹತ್ತು ವರ್ಷ ಹಳೆಯದ್ದು ಎಂದು ತಿಳಿದುಬಂದಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.