ADVERTISEMENT

ಮಹಾರಾಷ್ಟ್ರ ಗ್ರಾಪಂ ಚುನಾವಣೆ| 13 ಜಿಲ್ಲೆಗಳಲ್ಲಿ ಗೆದ್ದು ಅಚ್ಚರಿ ಮೂಡಿಸಿದ ಎಎಪಿ

ಪಿಟಿಐ
Published 19 ಜನವರಿ 2021, 13:17 IST
Last Updated 19 ಜನವರಿ 2021, 13:17 IST
ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌
ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌    

ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಫಲಿತಾಂಶಗಳನ್ನು ಸೋಮವಾರ ಪ್ರಕಟಿಸಲಾಗಿದೆ. ಆಮ್‌ ಆದ್ಮಿ ಪಕ್ಷ ಬೆಂಬಲಿತ ಕಾರ್ಯಕರ್ತರು 13 ಜಿಲ್ಲೆಗಳ 70 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಜನವರಿ 15 ರಂದು ನಡೆದ ಚುನಾವಣೆಯಲ್ಲಿ ಕನಿಷ್ಠ 300 ಮಂದಿ ಎಎಪಿ ಕಾರ್ಯಕರ್ತರು ಸ್ಪರ್ಧೆ ಮಾಡಿದ್ದರು ಎಂದು ಪಕ್ಷ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಲಾತೂರ್, ನಾಗ್ಪುರ, ಸೋಲಾಪುರ, ನಾಸಿಕ್, ಗೊಂಡಿಯಾ, ಚಂದ್ರಪುರ, ಪಾಲ್ಘರ್, ಹಿಂಗೋಲಿ, ಅಹ್ಮದ್‌ನಗರ, ಜಲ್ನಾ, ಯವತ್ಮಾಲ್ ಮತ್ತು ಭಂಡಾರ ಜಿಲ್ಲೆಗಳು ಸೇರಿದಂತೆ 13 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಆಮ್‌ ಆದ್ಮಿ ಗೆದ್ದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

'ಎಎಪಿಯ ಈ ಗೆಲುವಿನ ಹಿಂದಿನ ಶಕ್ತಿ ಮಹಿಳಾ ಕಾರ್ಯಕರ್ತರು. ಯಾಕೆಂದರೆ, ಗೆದ್ದಿರುವ ಸೀಟುಗಳ ಪೈಕಿ ಮಹಿಳೆಯರ ಪಾಲು ಶೇ. 50ರಷ್ಟಿದೆ,' ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಜನವರಿ 15 ರಂದು 12,711 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಸುಮಾರು 1.25 ಲಕ್ಷ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷದ ಚಿಹ್ನೆಗಳ ಮೇಲೆ ನಡೆಯುವುದಿಲ್ಲವಾದರೂ, ಪಕ್ಷಗಳು ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.