ADVERTISEMENT

ಮಹಾರಾಷ್ಟ್ರದಲ್ಲಿ ವೇತನ ಕಡಿತ ಇಲ್ಲ: ಆದೇಶ ಹಿಂಪಡೆದ ಸರ್ಕಾರ

ಪಿಟಿಐ
Published 31 ಮಾರ್ಚ್ 2020, 20:15 IST
Last Updated 31 ಮಾರ್ಚ್ 2020, 20:15 IST

ಮುಂಬೈ: ಮಹಾರಾಷ್ಟ್ರದಲ್ಲಿ ಜನಪ್ರತಿನಿಧಿಗಳ ವೇತನ ಕಡಿತಗೊಳಿಸುವುದಾಗಿ ಮಂಗಳವಾರ ಘೋಷಿಸಿದ್ದ ರಾಜ್ಯ ಸರ್ಕಾರ, ಕೆಲವೇ ತಾಸುಗಳಲ್ಲಿ ಈ ನಿರ್ಣಯ ಹಿಂಪಡೆಯಿತು.

ಇದರ ಬದಲಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಸೇರಿದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳ ವೇತನವನ್ನು ತಡವಾಗಿ ಎರಡು ಕಂತುಗಳಲ್ಲಿ ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.

ಪೌರಾಡಳಿತ ಸಂಸ್ಥೆಗಳ ಪ್ರತಿನಿಧಿಗಳಿಗೆ ಮಾರ್ಚ್ ತಿಂಗಳ ಶೇ 40 ವೇತನವನ್ನು ಮಾತ್ರ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಎ ಹಾಗೂ ಬಿ ದರ್ಜೆಯ ಉದ್ಯೋಗಿಗಳಿಗೆ ಶೇ 50, ಸಿ ದರ್ಜೆ ಉದ್ಯೋಗಿಗಳಿಗೆ ಶೇ 75 ವೇತನ ನೀಡಲಾಗುವುದು. ಡಿ ದರ್ಜೆ ಉದ್ಯೋಗಿಗಳ ವೇತನದಲ್ಲಿ ಯಾವುದೇ ಕಡಿತ ಇಲ್ಲ. ಏಪ್ರಿಲ್ ತಿಂಗಳ ವೇತನಕ್ಕೂ ಇದು ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.