ADVERTISEMENT

ಮಹಾರಾಷ್ಟ್ರ: ಮುಸ್ಲಿಂ ಧಾರ್ಮಿಕ ಮುಖಂಡನ ಬಂಧನ ಖಂಡಿಸಿ ಪ್ರತಿಭಟನೆ

ಪಿಟಿಐ
Published 2 ಅಕ್ಟೋಬರ್ 2021, 5:50 IST
Last Updated 2 ಅಕ್ಟೋಬರ್ 2021, 5:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಠಾಣೆ: ಉತ್ತರ ಪ್ರದೇಶದಲ್ಲಿ ಇಸ್ಲಾಮಿಕ್‌ ಧಾರ್ಮಿಕ ಮುಖಂಡನ ಬಂಧನ ಮತ್ತು ಅಸ್ಸಾಂನಲ್ಲಿ ನಡೆಯುತ್ತಿರುವ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ನೂರಾರು ಮುಸ್ಲಿಂರು ಇಲ್ಲಿನ ಮುಂಬ್ರಾದಲ್ಲಿ ಪ್ರತಿಭಟಿಸಿದರು.

ಮತಾಂತರ ನಡೆಸುತ್ತಿದ್ದ ಆರೋಪದಡಿ ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳದ ಸಿಬ್ಬಂದಿ ಈಚೆಗೆ ಧಾರ್ಮಿಕ ಮುಖಂಡ ಮೌಲಾನಾ ಕಲೀಂ ಸಿದ್ಧೀಖಿ ಅವರನ್ನು ಬಂಧಿಸಿತ್ತು. ಅಸ್ಸಾಂ ಸರ್ಕಾರ ಅಲ್ಲಿನ ದರಂಗ್ ಜಿಲ್ಲೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ, ಬಹುತೇಕ ಮುಸ್ಲಿಂರೇ ಇದ್ದ ನಿವಾಸಿಗಳನ್ನು ಎತ್ತಂಗಡಿ ಮಾಡಿಸುತ್ತಿದೆ.

ಧಾರ್ಮಿಕ ಮುಖಂಡನ ಬಂಧನ ಖಂಡಿಸಿ ಇಲ್ಲಿನ ಮುಂಬ್ರಾ–ಕೌಸಾ ಉಲಮಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಎರಡೂ ಕಾರ್ಯಾಚರಣೆಯು ಕಾನೂನುಬಾಹಿರವಾದುದು ಎಂದು ಪ್ರತಿಭಟಕಾರರು ಪ್ರತಿಪಾದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.