ADVERTISEMENT

Maha Kumbh 2025: ಜನವರಿ 29ರಂದು 10 ಕೋಟಿ ಭಕ್ತರಿಂದ 'ಅಮೃತ ಸ್ನಾನ'ದ ನಿರೀಕ್ಷೆ

ಪಿಟಿಐ
Published 24 ಜನವರಿ 2025, 16:13 IST
Last Updated 24 ಜನವರಿ 2025, 16:13 IST
.
.   

ಮಹಾಕುಂಭ ನಗರ: ಜನವರಿ 29ರ ‘ಮೌನಿ ಅಮವಾಸ್ಯೆ’ ದಿನ ಮಹಾಕುಂಭ ಮೇಳದಲ್ಲಿ ಸುಮಾರು 10 ಕೋಟಿ ಜನರು ‘ಅಮೃತ ಸ್ನಾನ’ ಮಾಡುವ ನಿರೀಕ್ಷೆ ಇದೆ. ಹೀಗಾಗಿ, ಜನಸ್ತೋಮ ಮತ್ತು ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ತಿಳಿಸಿದೆ.

ಎಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳು, ಉಪ ವಿಭಾಗೀಯ ಅಧಿಕಾರಿಗಳು, ಸೆಕ್ಟರ್‌ ಅಧಿಕಾರಿಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದೆ.

ಜನಸಮೂಹ ನಿಯಂತ್ರಣಕ್ಕಾಗಿಯೇ 12 ಕಿ.ಮೀ ಉದ್ದದ ಘಾಟ್‌ ನಿರ್ಮಿಸಲಾಗಿದೆ ಎಂದು ಹೇಳಿದೆ.

ADVERTISEMENT

ಮಕರ ಸಂಕ್ರಾಂತಿಯಿಂದ ಕುಂಭಮೇಳ ನಡೆಯುವ ಅಷ್ಟೂ ದಿನ ನೀರಿನಲ್ಲಿ ಮಿಂದೇಳುವುದನ್ನು ‘ಪವಿತ್ರ’ ಎಂದು ಭಾವಿಸಲಾಗುತ್ತದೆ. ಆದರೆ ಅಮೃತ ಸ್ನಾನದ (ಶಾಹಿ ಸ್ನಾನ) ದಿನಗಳನ್ನು ವಿಶೇಷವಾದ ದಿನಗಳೆಂದು ಎಂದು ಪರಿಗಣಿಸಲಾಗುತ್ತದೆ. ಫೆ.3ರ ವಸಂತ ಪಂಚಮಿ ದಿನವೂ ‘ಅಮೃತ ಸ್ನಾನ’ ನೆರವೇರಲಿದೆ. ಕೊನೆಯ ‘ಅಮೃತ ಸ್ನಾನ’ ಫೆ.26ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.