ADVERTISEMENT

ಮಹಾಕುಂಭ ಮೇಳ: ಉತ್ತರ ಪ್ರದೇಶದ 75 ಜೈಲುಗಳ 90,000 ಕೈದಿಗಳಿಗೆ ಪುಣ್ಯಸ್ನಾನ ಭಾಗ್ಯ

ಪಿಟಿಐ
Published 19 ಫೆಬ್ರುವರಿ 2025, 10:37 IST
Last Updated 19 ಫೆಬ್ರುವರಿ 2025, 10:37 IST
<div class="paragraphs"><p>ಮಹಾಕುಂಭ ಮೇಳ</p></div>

ಮಹಾಕುಂಭ ಮೇಳ

   

ಲಖನೌ: ಉತ್ತರ ಪ್ರದೇಶದಲ್ಲಿರುವ 75 ಜೈಲುಗಳಲ್ಲಿರುವ ಕೈದಿಗಳಿಗೆ ಪುಣ್ಯಸ್ನಾನವನ್ನು ದೊರಕಿಸುವ ಉದ್ದೇಶದಿಂದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಸಂಗಮದಲ್ಲಿನ ನೀರು ತರಿಸಲು ಬಂದೀಖಾನೆ ಇಲಾಖೆ ವ್ಯವಸ್ಥೆ ಮಾಡಿದೆ.

ಈ ಕಾರ್ಯಕ್ರಮವು ರಾಜ್ಯದ ಎಲ್ಲಾ ಜೈಲುಗಳಲ್ಲಿ ಫೆ. 21ರಂದು ಬೆಳಿಗ್ಗೆ 9.30ರಿಂದ 10ರವರೆಗೆ ಪುಣ್ಯ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಬಂದೀಖಾನೆ ಸಚಿವ ದಾರಾ ಸಿಂಗ್ ಚವ್ಹಾಣ್ ಅವರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಉತ್ತರ ಪ್ರದೇಶದ 75 ಜೈಲುಗಳಲ್ಲಿ ಒಟ್ಟು 90 ಸಾವಿರ ಕೈದಿಗಳಿದ್ದಾರೆ. ಇವುಗಳಲ್ಲಿ ಏಳು ಕೇಂದ್ರ ಕಾರಾಗೃಹಗಳಿವೆ.

ಪ್ರತಿ 12 ವರ್ಷಗಳಿಗೆ ಒಮ್ಮೆ ಕುಂಭ ಮೇಳ ಆಯೋಜಿಸಲಾಗುತ್ತದೆ. ಆದರೆ ಈ ಬಾರಿ ಆಯೋಜಿಸಲಾಗಿರುವ ಮಹಾಕುಂಭ ಮೇಳವು 144 ವರ್ಷಗಳಿಗೆ ಒಮ್ಮೆ ನಡೆಯುವಂತದ್ದು ಎಂದು ಆಯೋಜಕರು ಹೇಳಿದ್ದಾರೆ. ಜ. 13ರಿಂದ ಆರಂಭವಾಗಿರುವ ಕುಂಭಮೇಳ ಫೆ. 26ರಂದು ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.