ADVERTISEMENT

ಮಹಾರಾಷ್ಟ್ರ: ಏಳು ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 16:31 IST
Last Updated 13 ಜುಲೈ 2022, 16:31 IST
ಈಡಿಸ್ ಈಜಿಪ್ಟಿ ಸೊಳ್ಳೆ
ಈಡಿಸ್ ಈಜಿಪ್ಟಿ ಸೊಳ್ಳೆ   

ಮುಂಬೈ: ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ.

ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಹರಡುವ ಝಿಕಾ ವೈರಸ್‌ ಸೋಂಕು, ರಾಜ್ಯದಲ್ಲಿ ವರ್ಷದ ನಂತರ ಕಾಣಿಸಿಕೊಂಡಿದೆ. 2021ರ ಜುಲೈನಲ್ಲಿ ಝಿಕಾ ವೈರಸ್‌ ಮೊದಲ ಪ್ರಕರಣ ಪುಣೆಯಲ್ಲಿ ವರದಿಯಾಗಿತ್ತು.

‘ಮುಂಬೈ ಸಮೀಪದ ಪಾಲ್ಗರ್ ಜಿಲ್ಲೆಯ ತಲಸೇರಿ ತಾಲ್ಲೂಕಿನ ಆಶ್ರಮ ಶಾಲೆಯ ವಿದ್ಯಾರ್ಥಿನಿಗೆ ಝಿಕಾ ವೈರಸ್‌ ಸೋಂಕು ತಗುಲಿದೆ. ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಬಾಲಕಿಯಲ್ಲಿ ಬೇರೆ ಯಾವುದೇ ಲಕ್ಷಣಗಳು ಕಾಣಿಸಿಲ್ಲ. ಬಾಲಕಿ ಈಗ ಆರೋಗ್ಯವಾಗಿದ್ದಾರೆ’ ಎಂದು ರಾಜ್ಯ ಆರೋಗ್ಯ ಸರ್ವೇಕ್ಷಣಾಧಿಕಾರಿ ಅಧಿಕಾರಿ ಪ್ರದೀಪ್‌ ಆವಟೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.