ADVERTISEMENT

ಸಿಯಾಚಿನ್‌ನಲ್ಲಿ ಅಗ್ನಿವೀರನ ಸಾವು; ₹10 ಲಕ್ಷ ಪರಿಹಾರ ಘೋಷಿಸಿದ ಮಹಾರಾಷ್ಟ್ರ ಸಿಎಂ

ಪಿಟಿಐ
Published 26 ಅಕ್ಟೋಬರ್ 2023, 5:23 IST
Last Updated 26 ಅಕ್ಟೋಬರ್ 2023, 5:23 IST
<div class="paragraphs"><p>ಅಕ್ಷಯ್ ಲಕ್ಷ್ಮಣ್ ಗಾವತೆ</p></div>

ಅಕ್ಷಯ್ ಲಕ್ಷ್ಮಣ್ ಗಾವತೆ

   

(ಪಿಟಿಐ ಚಿತ್ರ)

ಮುಂಬೈ: ಕಳೆದ ವಾರ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟಿರುವ ಅಗ್ನಿವೀರ ಅಕ್ಷಯ್ ಲಕ್ಷ್ಮಣ್ ಗಾವತೆ ಅವರ ಕುಟುಂಬಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಗುರುವಾರ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ.

ADVERTISEMENT

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಪಿಂಪಲ್‌ಗಾಂವ್‌ನ ಸರಾಯ್‌ ಮೂಲದವರಾದ ಗಾವತೆ ಸಾವಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಸಂತಾಪ ಸೂಚಿಸಿದ್ದಾರೆ.

ಕಾರಕೋರಂ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟಕ್ಕಿಂತ ಸುಮಾರು 20 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್, ಜಗತ್ತಿನ ಅತಿ ಎತ್ತರದ ಸೇನಾ ನೆಲೆ ಎಂದು ಪರಿಗಣಿಸಲ್ಪಟ್ಟಿದೆ. ಇಲ್ಲಿನ ಹಿಮ ಪ್ರದೇಶದಲ್ಲಿ ಯೋಧರು ಅತಿ ಶೈತ್ಯದ ವಿರುದ್ಧವೂ ಹೋರಾಡಬೇಕಾಗುತ್ತದೆ.

ಗಾವತೆ ನಿಧನಕ್ಕೆ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಸಹ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.