ADVERTISEMENT

ಔರಂಗಾಬಾದ್‌ಗೆ ಸಂಭಾಜಿನಗರ, ಉಸ್ಮಾನಾಬಾದ್‌ಗೆ ಧರಶಿವ ಎಂದು ಮರುನಾಮಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2022, 9:30 IST
Last Updated 16 ಜುಲೈ 2022, 9:30 IST
ಏಕನಾಥ ಶಿಂಧೆ ಮತ್ತು ದೇವೇಂದ್ರ ಫಡಣವೀಸ್
ಏಕನಾಥ ಶಿಂಧೆ ಮತ್ತು ದೇವೇಂದ್ರ ಫಡಣವೀಸ್   

ಮುಂಬೈ: ಔರಂಗಾಬಾದ್‌ ಅನ್ನು ಛತ್ರಪತಿ ಸಂಭಾಜಿನಗರವೆಂದೂ, ಉಸ್ಮಾನಾಬಾದ್‌ ಅನ್ನು ಧರಶಿವ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಶನಿವಾರ ನಿರ್ಧರಿಸಿದೆ.

ಈ ಎರಡು ನಗರಗಳ ಹೆಸರನ್ನು ಬದಲಿಸಿ ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರ ಜೂನ್‌ 29ರಂದು ಆದೇಶ ಹೊರಡಿಸಿತ್ತು.

‘ಠಾಕ್ರೆ ನೇತೃತ್ವದ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವು ಕಾನೂನಾತ್ಮಕವಾಗಿ ಇರಲಿಲ್ಲ. ಕಾರಣ, ಆ ಸರ್ಕಾರ ಅಲ್ಪ ಬಹುಮತಕ್ಕೆ ಕುಸಿದಿತ್ತು. ನಮ್ಮ ಸರ್ಕಾರ ಮರುನಾಮಕರಣ ಮಾಡಿದ್ದು ಕಾನೂನಾತ್ಮಕವಾಗಿದೆ.’ ಎಂದು ಏಕನಾಥ ಶಿಂಧೆ ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ಈ ಕುರಿತ ಹೊಸ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ಶಿಂಧೆ ಹೇಳಿದ್ದಾರೆ.

ಇದೇ ವೇಳೆ, ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಡಿ.ಬಿ.ಪಾಟೀಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.