ADVERTISEMENT

ಹೆಲಿಕಾಪ್ಟರ್‌ ಅವಘಡ: ಪೈಲಟ್‌ಗೆ ಗಾಯ

ಪಿಟಿಐ
Published 3 ಮೇ 2024, 13:47 IST
Last Updated 3 ಮೇ 2024, 13:47 IST
<div class="paragraphs"><p>ಲ್ಯಾಂಡಿಂಗ್‌ ವೇಳೆ ನೆಲಕ್ಕಪ್ಪಳಿಸಿದ ಹೆಲಿಕಾಪ್ಟರ್‌ </p></div>

ಲ್ಯಾಂಡಿಂಗ್‌ ವೇಳೆ ನೆಲಕ್ಕಪ್ಪಳಿಸಿದ ಹೆಲಿಕಾಪ್ಟರ್‌

   

–ಪಿಟಿಐ ಚಿತ್ರ

ಮುಂಬೈ: ಶಿವಸೇನಾ (ಯುಬಿಟಿ) ನಾಯಕಿಯನ್ನು ಕರೆದೊಯ್ಯಬೇಕಿದ್ದ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ನೆಲಕ್ಕೆ ಅಪ್ಪಳಿಸಿ, ಪೈಲಟ್‌ ಗಾಯಗೊಂಡಿದ್ದಾರೆ.

ADVERTISEMENT

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಸುಷ್ಮಾ ಅಂಧಾರೆ ಅವರು ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಈ ಹೆಲಿಕಾಪ್ಟರ್‌ನಲ್ಲಿ ತೆರಳುವವರಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾಡ್‌ನಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಬೆಳಿಗ್ಗೆ 9.30ಕ್ಕೆ ಇಳಿಯುವಾಗ ಓರೆಯಾದ ಹೆಲಿಕಾಪ್ಟರ್‌ ನೆಲಕ್ಕೆ ಅಪ್ಪಳಿಸಿದೆ ಎಂದು ರಾಯಗಢ ಎಸ್‌ಪಿ ಸೋಮನಾಥ್‌ ಘಾರ್ಗ್ ಮಾಹಿತಿ ನೀಡಿದರು. 

‘ಹೆಲಿಕಾಪ್ಟರ್‌ ಇಳಿಯುವಾಗ ಭಾರಿ ದೂಳು ಎದ್ದದ್ದು ಅಪಘಾತಕ್ಕೆ ಕಾರಣವಾಗಿರಬಹುದು. ರೋಟರ್‌ ಬ್ಲೇಡ್‌ಗಳು ಮುರಿದಿದ್ದು, ಹೆಲಿಕಾಪ್ಟರ್‌ ಅಲ್ಪ ಜಖಂಗೊಂಡಿದೆ. ಪೈಲಟ್‌ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.