ಗೆಲುವಿನ ಸಂಭ್ರಮದಲ್ಲಿ ದೇವೇಂದ್ರ ಫಡಣವೀಸ್
- ಪಿಟಿಐ ಚಿತ್ರ
ಮುಂಬೈ: ಮಹಾರಾಷ್ಟ್ರದ 29 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 20ಕ್ಕೂ ಅಧಿಕ ಪಾಲಿಕೆಗಳಲ್ಲಿ ಬಿಜೆಪಿ ಹಾಗೂ ಶಿವಸೇನಾ(ಶಿಂದೆ) ಮೈತ್ರಿಕೂಟವಾದ ‘ಮಹಾಯುತಿ’ ಗೆಲುವು ಸಾಧಿಸಿದೆ.
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ತಂತ್ರಗಾರಿಕೆಯಿಂದ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಈ ಮೂಲಕ, ತಾವು ರಾಜ್ಯ ರಾಜಕಾರಣದಲ್ಲಿ ಪ್ರಶ್ನಾತೀತ ನಾಯಕ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಪಕ್ಷದ ವಲಯದಲ್ಲಿ ‘ಧುರಂದರ್ ದೇವೇಂದ್ರಜಿ’, ‘ದೇವ ಭಾವು’ ಎಂದು ಕರೆಯಲಾಗುವ ಫಡಣವೀಸ್, ಬಿಜೆಪಿಯ ‘ಟ್ರಬಲ್ ಶೂಟರ್’ ಎಂದೂ ಖ್ಯಾತರು. ಚುನಾವಣೆ ಸಮೀಪಿಸುತ್ತಿದ್ದಾಗ, ಶರದ್ ಪವಾರ್ ಜೊತೆ ಕೈಜೋಡಿಸಿದ್ದ ಡಿಸಿಎಂ ಅಜಿತ್ ಪವಾರ್ ಅವರಿಗೂ ಫಡಣವೀಸ್ ಈ ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಗಮನ ಸೆಳೆದ ಎಐಎಂಐಎಂ: ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಛತ್ರಪತಿ ಸಂಭಾಜಿನಗರ ಪಾಲಿಕೆಯಲ್ಲಿ 33 ಸ್ಥಾನಗಳನ್ನು ಗೆದ್ದಿರುವ ಪಕ್ಷವು, ನಾಸಿಕ್ ಜಿಲ್ಲೆಯ ಮಾಲೆಗಾಂವ್ ಪಾಲಿಕೆಯಲ್ಲಿ 20 ಸ್ಥಾನಗಳನ್ನು ಗೆದ್ದು ಬೀಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.